Advertisement

ಮಾನಸಿಕ ಅಸ್ವಸ್ಥರ ಸೇವೆ ದೇವರ ಸೇವೆ

05:29 AM Jun 05, 2020 | Lakshmi GovindaRaj |

ಮಂಡ್ಯ: ಸಾಮಾಜಿಕ ಮತ್ತು ಕೌಟುಂಬಿಕ ನಿರ್ಲಕ್ಷ್ಯದಿಂದ ಮಾನಸಿಕ ಅಸ್ವಸ್ಥರನ್ನು ಉಪಚರಿಸುವುದು ದೇವರ ಸೇವೆಗೆ ಸಮಾನ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಕೆ.ಪಿ.ಅಶ್ವತ್ಥ್ ಹೇಳಿದರು.

Advertisement

ತಾಲೂಕಿನ  ಕೋಣನಹಳ್ಳಿ ಎಂ.ಜಿ.ಬಡಾವಣೆಯಲ್ಲಿನ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ, ಮಾನಸಧಾರಾ ವತಿಯಿಂದ 5ನೇ ವಾರ್ಷಿಕೋತ್ಸವದ ಅಂಗವಾಗಿ ಮಾನಸಿಕ ಅಸ್ವಸ್ಥರು ಮತ್ತು ಅವರ ಕುಟುಂಬದ ಸದಸ್ಯರಿಗೆ ಆಹಾರ ಕಿಟ್‌ ವಿತರಿಸಿ  ಮಾತನಾಡಿದರು, ಆರೋಗ್ಯ ಕ್ಷೇತ್ರದ ಸೇವೆ ಮಹತ್ವದ್ದಾಗಿದ್ದು, ಕೊರೊನಾ ವಿರುದ್ಧದ ಸಮರ ಇದಕ್ಕೆ ಸಾಕ್ಷಿಯಾಗಿದೆ. ನಮ್ಮ ದುಡಿಮೆಗೆ ಸಂಬಳ ಮತ್ತು ಪುಣ್ಯ ಎರಡೂ ಸಿಗುತ್ತದೆ. ಆದ್ದರಿಂದ ಆರೋಗ್ಯ ಕ್ಷೇತ್ರ ದಲ್ಲಿ ಕಾಯಕನಿಷ್ಠೆ ಇರಬೇಕು ಎಂದು  ಪ್ರತಿಪಾದಿಸಿದರು.

ನೂರಾರು ಅಸ್ವಸ್ಥರಿಗೆ ನೆರವು: ಮಾನಸಧಾರ ಸೇವಾ ಸಾಧನೆಯನ್ನು ಪ್ರಶಂಶಿಸುತ್ತಾ, 5 ವರ್ಷಗಳಿಂದ ಈ ಸಂಸ್ಥೆ ನೂರಾರು ಅಸ್ವಸ್ಥರಿಗೆ ನೆರವಾಗಿದೆ. ಅವರಿಗೆ ಸ್ವಯಂ ಉದ್ಯೋಗದ ಮೂಲಕ ಬದುಕನ್ನು ಕಟ್ಟಿಕೊಡುವ  ಕೆಲಸವನ್ನು ಮಾಡಿಕೊಂಡು ಬಂದಿದೆ. ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು. ಮಾನಸಧಾರ ಮತ್ತು ಸೆಂಟ್‌ಥಾಮಸ್‌ ಮಿಷನ್‌ ಸೊಸೈಟಿ ನಿರ್ದೇಶಕ ಜೋಷ್‌ಕುಟ್ಟಿ ಮಾತನಾಡಿ,  ಮಾನಸಿಕ ಅಸ್ವಸ್ಥರ ಬದುಕಿಗೆ ಸ್ಪಂದಿಸುವ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಉದ್ದೇಶದಿಂದ ಈ ಸಂಸ್ಥೆ ಆರಂಭಗೊಂಡಿದೆ.

ಈಗ ಹಲವು ಜನರಿಗೆ ನೆರವಾಗಿದ್ದೇವೆ. ಲಾಕ್‌ಡೌನ್‌ನಿಂದ ಉಂಟಾಗಿರುವ ಸಂಕಷ್ಟ ನಿವಾರಣೆಗಾಗಿ ನಿರಂತರ ಆಹಾರ ಕಿಟ್‌  ವಿತರಿಸಿದ್ದೇವೆ ಎಂದರು. ಡಿ. ದೇವರಾಜ ಅಸರು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್‌. ಸಂದೇಶ್‌, ಸೆಂಟ್‌ಥಾಮಸ್‌ ಸೊಸೈಟಿ ಅಧ್ಯಕ್ಷ ಜೋಸೆಫ್‌, ಆಶಾ ಸದನ ನಿರ್ದೇಶಕರಾದ ಸೋಜನ್‌ ಸ್ಯಾಲೀಸ್‌ ಸುಹೇಲ್‌, ಮುಖಂಡ  ಸಿ.ಸಿದ್ಧಶೆಟ್ಟಿ, ಆರೋಗ್ಯ ಇಲಾಖೆಯ ರಾಘವೇಂದ್ರ, ಗೋವಿಂದರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next