Advertisement

ಕಲಾವಿದರ ಸೇವೆಗೆ ರಂಗ ಮಿತ್ರರು ಸಜ್ಜು

02:27 PM May 06, 2021 | Team Udayavani |

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ಹಲವು ರಂಗಕಲಾವಿದರು ತೊಂದರೆಯಲ್ಲಿದ್ದಾರೆ. ಸಂಕಷ್ಟದಲ್ಲಿರುವ ಕಲಾವಿದರಿಗೆ ವೈದ್ಯಕೀಯ ಸೇವೆಗಳ ಮಾಹಿತಿ ಸೇರಿದಂತೆ ಇನ್ನಿತರ ಸಲಹೆ ನೀಡುವ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಮತ್ತು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಸೇರಿದಂತೆ ಹಿರಿಯ ರಂಗ ಕಲಾವಿದರು “ರಂಗಕಲಾವಿದರಿಗಾಗಿ ರಂಗ ಮಿತ್ರರು’ ತಂಡ ಕಟ್ಟಿದ್ದಾರೆ .

Advertisement

ನಾಡಿನಲ್ಲಿ ಅಧಿಕ ಸಂಖ್ಯೆ ರಂಗಕಲಾವಿದರು ಇದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಅವರು ಅನೇಕರೀತಿಯ ತೊಂದರೆಯಲ್ಲಿ ಸಿಲುಕಿದ್ದಾರೆ. ಅಂತಹವರಿಗೆ ಒಂದಿಷ್ಟು ಅನುಕೂಲವಾಗಲಿ ಎಂಬ ಸದುದ್ದೇಶದಿಂದ “ರಂಗಕಲಾವಿದರಿಗಾಗಿ ರಂಗಮಿತ್ರರು “ತಂಡ ಹುಟ್ಟಿಕೊಂಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರ ಜತೆಗೆ ನಾಟಕ ಅಕಾಡೆಮಿಮಾಜಿ ಅಧ್ಯಕ್ಷ ಜೆ.ಲೋಕೇಶ್‌, ಕನ್ನಡ ಅಭಿವೃದ್ಧಿಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಹಿರಿಯಚಿತ್ರಕಲಾವಿದ ಮುಖ್ಯಮಂತ್ರಿ ಚಂದ್ರು, ಹಿರಿಯರಂಗ ಕರ್ಮಿ ಬಿ.ವಿ.ರಾಜರಾಂ, ಕೆ.ವಿ.ನಾಗರಾಜಮೂರ್ತಿ, ಶಶಿಧರ ಬಾರಿಘಾಟ್‌, ಜಿಪಿಒ ಚಂದ್ರುಸೇರಿದಂತೆ ಅನೇಕ ಹಿರಿಯ ಕಲಾವಿದರು ರಂಗಕಲಾವಿದರಿಗಾಗಿ ರಂಗ ಮಿತ್ರರು ತಂಡದಲ್ಲಿದ್ದಾರೆ.

ಈ ತಂಡ ವ್ಯಾಟ್ಸ್ ಆ್ಯಪ್‌ ಮತ್ತು ಮೊಬೈಲ್‌ಮೂಲಕ ಆರೋಗ್ಯ ಸೇವೆಗಳ ಸಹಾಯವನ್ನುಕಷ್ಟದಲ್ಲಿರುವ ಕಲಾವಿದರಿಗೆ ನೀಡಲಿದೆ. ಆಸ್ಪತ್ರೆಗಳಹಾಸಿಗೆ ಮಾಹಿತಿ, ಸರ್ಕಾರಿ ಮತ್ತು ಬಿಬಿಎಂಪಿಅಧಿಕಾರಿಗಳ ಸಂಪರ್ಕ ಮತ್ತು ವೈದ್ಯರ ಮಾಹಿತಿಗಳನ್ನು ನೀಡಲಿದೆ ಎಂದು ಹಿರಿಯ ನಟಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಕಳೆದ ಬಾರಿಯ ಕೋವಿಡ್‌ ವೇಳೆ ರಂಗ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.ಈಗಲೂ ಅದೇರೀತಿಯ ಕಷ್ಟದಲ್ಲಿದ್ದಾರೆ. ಔಷಧಿ ಖರ್ಚು ಸೇರಿದಂತೆ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದರು.

ಕಲಾವಿದರಿಗೆ ಶೀಘ್ರ ಲಸಿಕೆ: ರಂಗಕಲಾವಿದರೆಲ್ಲರಿಗೂ ಕೋವಿಡ್‌ ಲಸಿಕೆ ಕೊಡಿಸುವ ನಿಟ್ಟಿನಲ್ಲಿಹೆಜ್ಜೆಯಿರಿಸಲಾಗಿದೆ. ಈ ಸಂಬಂಧ ಮುಖ್ಯ ಮಂತ್ರಿಬಿ.ಎಸ್‌.ಯಡಿಯೂರಪ್ಪ ಅವರಿಗೂ ಮನವಿ ಮಾಡಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿದ್ದಾರೆ. ಶೀಘ್ರದಲ್ಲೇ ರವೀಂದ್ರ ಕಲಾ ಕ್ಷೇತ್ರದಲ್ಲಿ ರಂಗಕಲಾವಿದರಿಗೆ ಲಸಿಕೆ ನೀಡುವ ಕಾರ್ಯ ನಡೆಯಲಿದೆ.ನಮ್ಮಿಂದ ಎಷ್ಟು ಸಹಾಯ ಮಾಡಬಹುದುಅಷ್ಟನ್ನೂ ಕಲಾವಿದರಿಗಾಗಿ ಮಾಡಲಾಗುವುದು.

ನಮ್ಮ ಸಹಾಯ ಕೇವಲ ರಂಗಕಲಾವಿದರಿಗೆ ಅಷ್ಟೇಅಲ್ಲ ಜಾನಪದ,ಯಕ್ಷಗಾನ, ಸಂಗೀತ ನೃತ್ಯಕಲಾವಿದರಿಗೂ ನೀಡಲಾಗುವುದು. ಸದ್ಯ ಬೆಂಗಳೂರನ್ನು ಕೇಂದ್ರೀಕರಿಸಲಾಗಿದೆ ಎಂದು ಹೇಳಿದ್ದಾರೆ.

Advertisement

ಆರ್ಥಿಕ ಸಹಾಯವಿಲ್ಲ: ಕಳೆದ ಬಾರಿಯ ಕೋವಿಡ್‌ ಸಂಕಷ್ಟದ ವೇಳೆ ಸರ್ಕಾರದ ಮೂಲಕ ಕಲಾವಿದರುಗಳಿಗೆ ಆರ್ಥಿಕ ಸಹಾಯ ನೀಡಲಾಗಿತ್ತು. ಈ ಬಾರಿ ಸರ್ಕಾರ ಕೂಡ ಕೋವಿಡ್‌ ಸಂಕಷ್ಟದಲ್ಲಿದೆ. ಹೀಗಾಗಿ ಕಲಾವಿದರಿಗೆ ಆರೋಗ್ಯ ಸೇವೆ ಬಗ್ಗೆ ನೆರವು ನೀಡಲಾಗುವುದು ಎಂದು ಹಿರಿಯರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಹೇಳಿದ್ದಾರೆ. ಈಗಾಗಲೇ ಕಷ್ಟದಲ್ಲಿದ್ದ ಹಲವು ಕಲಾವಿದರು ನೆರವು ಪಡೆದಿದ್ದಾರೆ.

ವೈದ್ಯಕೀಯ ನೆರವು ಕೂಡ ನೀಡಲಾಗಿದೆ.ಕೋವಿಡ್‌ ಬಂದ ತಕ್ಷಣ ಭಯ ಪಡುವ ಅಗತ್ಯವಿಲ್ಲ.ರಂಗಭೂಮಿ ಕಲಾವಿದರಿಗೆ ಸರ್ಕಾರಿ ವೈದ್ಯಕೀಯಸೇವೆ ಪಡೆಯುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ.ಸರ್ಕಾರಿ ಸೌಲಭ್ಯದ ಜತೆಗೆ ಧೈರ್ಯ ತುಂಬುವ ಕೆಲಸಇದಾಗಿದೆ ಎಂದರು.

ಕೋವಿಡ್‌ಸಂಕಷ್ಟದಲ್ಲಿ.ರುವ ಕಲಾವಿದರಿಗೆಒಂದಿಷ್ಟುನೆರವಾಗಲಿ ಎಂಬಕಾರಣದಿಂದ ಈತಂಡ ಹುಟ್ಟಿಕೊಂಡಿದೆ. ಆರೋಗ್ಯಕ್ಷೇತ್ರಕ್ಕೆಸಂಬಂಧಿಸಿದ ಕಷ್ಟಗಳಿದ್ದರೆ ತಂಡವನ್ನುಕಲಾವಿದರು ಸಂಪರ್ಕಿಸಬಹುದಾಗಿದೆ.

ಟಿ.ಎಸ್‌.ನಾಗಾಭರಣ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

 

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next