ಸೆ.17ರಂದು ಪ್ರಧಾನಿ ನರೇಂದ್ರ ಮೋದಿ, ಸೆ.25ರಂದು ದೀನದಯಾಳ್ ಉಪಾಧ್ಯಾಯ ಹಾಗೂ ಅ.2ರಂದು ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಅಷ್ಟೂ ದಿನಗಳ ಕಾಲ ಸೇವಾ ಚಟುವಟಿಕೆಗಳು ನಡೆಯಲಿವೆ.
Advertisement
ಪ್ರಮುಖವಾಗಿ ರಕ್ತದಾನ ಶಿಬಿರಗಳು, ಆರೋಗ್ಯ ಶಿಬಿರಗಳು, ವಿಶಿಷ್ಟ ಚೇತನರಿಗೆ ಅವಶ್ಯ ಸಲಕರಣೆ ವಿತರಣೆ, ಆಸ್ಪತ್ರೆಗಳಲ್ಲಿರುವ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುವುದು, ಜತೆಗೆ ಹಣ್ಣು-ಹಂಪಲು ವಿತರಣೆ, ಪಿಎಂ ಸ್ವಾನಿಧಿ ಕಾರ್ಡ್ ವಿತರಣೆ, ಕೆರೆ, ಬಾವಿಗಳ ಹೂಳೆತ್ತುವುದು ಸಹಿತ ವಿವಿಧ ಚಟುವಟಿಕೆಗಳು ನಡೆಯಲಿವೆ.
ಕಳೆದ 9.5 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿರುವ ಸಾಧನೆಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರಮಾಣ ವಚನ ಸ್ವೀಕಾರದಿಂದ ಹಿಡಿದು ಇತ್ತೀಚಿನ ಜಿ-20 ಶೃಂಗದವರೆಗೆ ದೇಶದಲ್ಲಾಗಿರುವ ಜನಪರ ಹಾಗೂ ಅಭಿವೃದ್ಧಿಪರವಾದ ಕಾರ್ಯಕ್ರಮಗಳನ್ನು ಸಾಧನಾ ಪ್ರದರ್ಶಿನಿ ಮೂಲಕ ಜನರಿಗೆ ತಲುಪಿಸಲಾಗುತ್ತದೆ. ಆಯುಷ್ಮಾನ್ ಭವ
ರವಿವಾರದಿಂದ ಸೆ.24ರ ವರೆಗೆ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ, ರಕ್ತದಾನ ಶಿಬಿರಗಳು, ಆರೋಗ್ಯ ಶಿಬಿರಗಳು ನಡೆಯಲಿವೆ.
Related Articles
ಸೆ.17ರಿಂದ 24ರ ವರೆಗೆ ಜಿಲ್ಲಾ ಕೇಂದ್ರಗಳವರೆಗೆ ನಡೆಯುವ ಸೇವಾ ಪಾಕ್ಷಿಕವನ್ನು ಸೆ.25ರ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಬೂತ್ ಮಟ್ಟಕ್ಕೆ ಕೊಂಡೊಯ್ಯಲಾಗುತ್ತದೆ. ಸೆ.26ರಿಂದ ಅ.1ರ ವರೆಗೆ ಬೂತ್ ಮಟ್ಟದಿಂದ ಮನೆ-ಮನೆಗೆ ಸೇವಾ ಪಾಕ್ಷಿಕದ ಉದ್ದೇಶಗಳನ್ನು ಕೊಂಡೊಯ್ಯಲಾಗುವುದು. ಮಂಡಲ ಮಟ್ಟದಲ್ಲಿ ನನ್ನ ಮಣ್ಣು, ನನ್ನ ದೇಶ ಅಭಿಯಾನದ ಮೂಲಕ ಮಣ್ಣು ಸಂಗ್ರಹಿಸಿ, ದಿಲ್ಲಿಯಲ್ಲಿ ನಿರ್ಮಾಣಗೊಳ್ಳಲಿರುವ ಅಮೃತ ಉದ್ಯಾನವನಕ್ಕೆ ಕಳುಹಿಸಿಕೊಡಲಾಗುತ್ತದೆ.
Advertisement
ಕುರುಡುಮಲೆ ಗಣಪತಿಗೆ ಬಿಎಸ್‌ವೈ ಪೂಜೆಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಸೆ.17ರ ರವಿವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬೆಳಗ್ಗೆ 10.30ಕ್ಕೆ ಕೋಲಾರದ ಮುಳುಬಾಗಿಲಿನಲ್ಲಿರುವ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಮಹಾಪೂಜೆ ನಡೆಸಿ, ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ರಾಜ್ಯ ಪ್ರವಾಸವನ್ನೂ ಕೈಗೊಳ್ಳಲಿದ್ದಾರೆ. ಈ ಕುರಿತು ಮಾಹಿತಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿ.ಟಿ. ರವಿ ಮುಂತಾದ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.