Advertisement

ರೋಗಿಗಳ ಸಹಾಯಕರ ಸೇವಾ ಕೇಂದ್ರ ಆರಂಭ

06:50 PM Jun 02, 2021 | Team Udayavani |

ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಹಿಮ್ಸ್‌) ಆಸ್ಪತ್ರೆಯ ನಿಗದಿತ ಕೊರೊನಾವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವನೆರವಿಗೆ ದೂರದ ಊರುಗಳಿಂದ ಬಂದಿರುವವರು ಉಚಿತವಾಗಿ ತಂಗಲುಹಾಗೂ ಊಟೋಪಚಾರ ನೀಡುವ ಸೇವಾಕೇಂದ್ರಕ್ಕೆ ಶಾಸಕ ಪ್ರೀತಂ ಜೆ.ಗೌಡ ಮತ್ತು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರುಮಂಗಳವಾರ ಚಾಲನೆ ನೀಡಿದರು.

Advertisement

ನಗರದಲ್ಲಿ ಹಳೆಕೋರ್ಟ್‌ ಕಟ್ಟಡದ ಹಿಂಭಾಗ, ಜಿಲ್ಲಾ ಖಜಾನೆಯ ಪಕ್ಕದಲ್ಲಿರುವಪಬ್ಲಿಕ್‌ ಪ್ರಾಸಿಕ್ಯೂಟರ್‌ ಹಳೆ ಕಚೇರಿ ಕಟ್ಟಡದಲ್ಲಿಜಿಲ್ಲಾ ಆಸ್ಪತ್ರೆಗೆ ಕೊರೊನಾ ಸೋಂಕಿತರಉಪಚಾರಕ್ಕಾಗಿ ದೂರದ ಊರುಗಳಿಂದ ಬಂದಂತಹ ರೋಗಿಗಳ ಸಂಬಂಧಿಕರಿಗೆ ಉಚಿತವಾಗಿ ವಸತಿ ವ್ಯವಸ್ಥೆ ಸಹಿತ 3 ಹೊತ್ತುಊಟ,2ಹೊತ್ತುಕಷಾಯ,ಸ್ನಾನ-ಶೌಚಾಲಯವ್ಯವಸ್ಥೆ, ಕುಡಿಯಲು ಬಿಸಿನೀರು ವ್ಯವಸ್ಥೆಯಸೇವಾ ಕೇಂದ್ರ ಆರಂಭಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಶ್ರೀ ಜನಜಾಗರಣ ಟ್ರಸ್ಟ್‌, ಸೇವಾ ಭಾರತಿ ವತಿಯಿಂದಸೇವಾ ಕೇಂದ್ರ ನಡೆಯಲಿದೆ. ಸುಮಾರು 45ಹಾಸಿಗೆಗಳ ಉಚಿತ ಊಟದ ವ್ಯವಸ್ಥೆ ಪುರುಷರಿಗೆಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆಮಾಡಿದ್ದಾರೆ ಎಂದು ಹೇಳಿ¨ರು‌ .ಎಸ್ಪಿ ಶ್ರೀನಿವಾಸಗೌಡ, ಆರ್‌ಎಸ್‌ಎಸ್‌ವಿಭಾಗ ಕಾರ್ಯವಾಹ ವಿಜಯ್‌ ಕುಮಾರ್‌,ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿಮತ್ತಿñರರ ುಈÓ ‌ ‌ಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next