ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಪದ್ಧತಿ ಅಳವಡಿಸಿ ವರ್ಷವೇ ಕಳೆದಿದೆ. ಅಂದಿನಿಂದ ಇಂದಿನ ವರೆಗೆ ಪಡಿತರ ವಿತರಣೆಯಲ್ಲಿ ಒಂದಲ್ಲ ಒಂದು ಸಮಸ್ಯೆ. ಪ್ರಾರಂಭದಲ್ಲಿ ಫಲಾನುಭವಿಗಳ ಬೆರಳಚ್ಚು ಸಮಸ್ಯೆ ಯಿತ್ತು. ಈಗ 3 ತಿಂಗಳುಗಳಿಂದ ಸರ್ವರ್ ಸಮಸ್ಯೆ.
Advertisement
ಸಮಸ್ಯೆಗಳ ಆಗರನ್ಯಾಯಬೆಲೆ ಅಂಗಡಿ ಸಮಸ್ಯೆಗಳ ಆಗರವಾಗಿದೆ. ಸರಿಯಾದ ಸಮಯಕ್ಕೆ ಪಡಿತರ ಸಿಗದೆ ಜನರು ಸಿಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಒಮ್ಮೆ ಸರ್ವರ್ ಸಂಪರ್ಕವನ್ನು ಕಳೆದುಕೊಂಡರೆ ಮತ್ತೆ ಸಂಪರ್ಕ ಸಾಧಿಸಲು ಅರ್ಧ ಗಂಟೆಯಾದರೂ ಬೇಕು. ಕೆಲವೊಮ್ಮೆ ದಿನಪೂರ್ತಿ ಸಂಪರ್ಕ ಸಿಗದೆ ಇರುವುದೂ ಇದೆ.
ಸರ್ವರ್ ದೋಷದಿಂದ ಗ್ರಾಹಕರು ದಿನಪೂರ್ತಿ ಸರತಿಯಲ್ಲಿ ಕಾಯಬೇಕಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಕಾದರೂ ಸಾಮಗ್ರಿಗಳು ಸಿಗುತ್ತಿಲ್ಲ. ಇದರಿಂದಾಗಿ ದಿನಗೂಲಿ ಕಾರ್ಮಿಕರ ದಿನವೇ ವ್ಯರ್ಥ ವಾಗುತ್ತಿದೆ. ಆಯಾ ತಿಂಗಳ ಪಡಿತರ ಆಯಾ ತಿಂಗಳಲ್ಲಿ ಪಡೆಯಬೇಕಾಗಿರುವುದರಿಂದ ಸಾರ್ವಜನಿಕರು ಪಡಿತರದಿಂದ ವಂಚಿತವಾಗುತ್ತಿದ್ದಾರೆ. ಸಿಬಂದಿಗೆ ಸಂಕಷ್ಟ
ಸರ್ವರ್ ಸಮಸ್ಯೆಯಿಂದ ಪಡಿತರ ಸಾಮಗ್ರಿಯನ್ನು ನಿಗದಿ ಸಮಯದೊಳಗೆ ನೀಡಲು ಸಾಧ್ಯವಾಗುತ್ತಿಲ್ಲ. ಸರ್ವರ್ ಸಮಸ್ಯೆಯಿಂದ ನಿತ್ಯ 15 ಜನರಿಗೆ ಪಡಿತರ ವಿತರಿಸಲು ಸಾಧ್ಯವಾಗುತ್ತಿಲ್ಲ.
Related Articles
ಸರ್ವರ್ ಸಮಸ್ಯೆಯಿಂದ ಹೆಸರು ಸೇರ್ಪಡೆಯಾಗಿ ಬಂದಿರುವ ಹೊಸ ಕಾರ್ಡ್ ಪ್ರತಿಯನ್ನು ಮುದ್ರಿಸಲು ಅಧಿಕಾರಿಗಳು ಪರದಾಡುತ್ತಿದ್ದಾರೆ. ತಾಲೂಕು ಕಚೇರಿಯಲ್ಲಿ ಸಾರ್ವಜನಿಕರು ನಿತ್ಯ ಗಂಟೆಗಟ್ಟಲೆ ಕಾಯಬೇಕಾಗಿದೆ. ಫಲಾನುಭವಿಗಳು ಹೊಸ ಕಾರ್ಡ್ ಪ್ರತಿ ಸಿಗದೆ ಇರುವುದರಿಂದ ರೇಶನ್‌ನಿಂದ ವಂಚಿತರಾಗುತ್ತಿದ್ದಾರೆ.
Advertisement
ಎರಡು ತಿಂಗಳ ರೇಶನ್ ಸಿಕ್ಕಿಲ್ಲ!ಪಡಿತರ ಪಡೆಯಲು ತಿಂಗಳಿಗೆ ಮೂರು ಬಾರಿ ನ್ಯಾಯಬೆಲೆ ಅಂಗಡಿಗೆ ಹೋಗಬೇಕಾಗಿದೆ. ಕೆಲಸಕ್ಕೆ ರಜೆ ಮಾಡಿ ರೇಶನ್ ತರುವ ಸ್ಥಿತಿ. ಸರ್ವರ್ ಸಮಸ್ಯೆಯಿಂದ ಎರಡು ತಿಂಗಳುಗಳಿಂದ ರೇಶನ್ ಸಿಕ್ಕಿಲ್ಲ.
– ಸುಚಿತ್ರಾ, ಉಪ್ಪಿನಕೋಟೆ ರಾಜ್ಯದ ಸಮಸ್ಯೆ
ನ್ಯಾಯಬೆಲೆ ಅಂಗಡಿ ಸರ್ವರ್ ಸಮಸ್ಯೆ ಜಿಲ್ಲೆ ಯಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಇದೆ.
-ಡಾ| ನಾಗರಾಜ್ ಎಲ್., ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಉಡುಪಿ