Advertisement
ವಿಧಾನಸಭಾ ಚುನಾವಣೆ ಘೋಷಣೆ ಆದಾಗಿನಿಂದ ಸಾರ್ವಜನಿಕರ ಕೆಲಸಗಳನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಆದರೆ, ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೊಂಡ ದಿವಸದಿಂದ ಬಹುತೇಕ ಎಲ್ಲಾ ಇಲಾಖೆ ವೈಬ್ ಸೈಟ್‌ಗಳು, ಮೊಬೈಲ್ ಆ್ಯಪ್‌ಗ್ಳು ಬೇಗ ತಮ್ಮ ಮುಖ ಪುಟ ತೆರೆಯದೆ ಅಲ್ಲೇ ಸುತ್ತುವ ಮೂಲಕ ಸರ್ವರ್ ಡೌನ್ ಸಮಸ್ಯೆ ಎದುರಿಸುತ್ತಿವೆ. ಇದರಿಂದ ಸಾರ್ವಜನಿಕರು, ರೈತರು ಹಾಗೂ ಕೆಲ ಇಲಾಖೆ ಕಚೇರಿಯಲ್ಲಿ ಫಲಾ ನುಭವಿಗಳು ದಿನಪೂರ್ತಿ ಕಾಯುವಂತಾಗಿದೆ.
Related Articles
Advertisement
ಜಾಗೃತಿ ಆ್ಯಪ್‌ನದ್ದೂ ಸಮಸ್ಯೆ: ವಿಧಾನಸಭಾ ಚುನಾವಣೆ ಹಿನ್ನೆಲೆ ಕಡ್ಡಾಯ ಮತದಾನ ಜಾಗೃತಿ ಮೂಡಿಸಲು ವೈಬ್‌ಸೈಟ್‌ಗಳು ಮತ್ತು ಆ್ಯಪ್ ಗಳನ್ನು ಹೆಚ್ಚು ಉಪಯೋಗ ಮಾಡುತ್ತಿದ್ದು, ಏಕಕಾಲಕ್ಕೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಸಹಾಯಕ ಚುನಾವಣಾಧಿಕಾರಿಗಳು ಇದನ್ನು ಉಪಯೋಗಿಸುತ್ತಿರುವುದರಿಂದ ಜಾಗೃತಿ ಆ್ಯಪ್ ಮತ್ತು ಸೈಟ್‌ಗಳು ಸ್ಲೋ ಆಗುತ್ತಿದೆ. ಕೆಲಸದ ಒತ್ತಡ ಸಮಯದಲ್ಲಿ ನೆಟ್‌ವರ್ಕ್ ನಿಧಾನ ಆಗುತ್ತಿರುವುದರಿಂದ ಚುನಾವಣಾ ಸಿಬ್ಬಂದಿಗಳಿ ಗೂ ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದಾರೆ.
ಪಿಂಚಣೆ, ವೇತನಕ್ಕೂ ಕತ್ತರಿ: ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ಪಡೆಯುವ ಫಲಾನುಭವಿಗಳು, ವೃದ್ಧಾಪ್ಯವೇತನ, ವಿಧವಾ ವೇತನ, ದಿವ್ಯಾಂಗ ವೇತನ, ನಿವೃತ್ತಿ ನೌಕರರ ವೇತನ, ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವೇತನಗಳಿ ಗೂ ಆನ್ ಲೈನಲ್ಲಿ ಪಟ್ಟಿ ಸಲ್ಲಿಸಬೇಕಿದೆ. ಇದರೊಂದಿಗೆ ಸೇವೆಗೆ ಹಾಜರಾಗಿರುವ ಬಗ್ಗೆಯು ಆನ್‌ಲೈನ್‌ನಲ್ಲಿ ಹಾಜರಾತಿ ಸಲ್ಲಿಸುವುದು ಕಡ್ಡಾಯ. ಆದರೆ, ವೈಬ್‌ಸೈಟ್‌ಗಳಲ್ಲಿನ ತಾಂತ್ರಿಕ ದೋಷದಿಂದಾಗಿ ಎಲ್ಲಾ ಕಾರ್ಯಗಳು ಮತ್ತೆ ಕಡತಗಳಿಗೆ ಜೋತು ಬೀಳುವ ಸ್ಥಿತಿ ಸೃಷ್ಟಿಯಾಗಿರುವುದು ವಿಪರ್ಯಾಸವೇ ಸರಿ.
ಚುನಾವಣೆ ಪೂರ್ಣಗೊಳ್ಳುವ ತನಕ ಸರ್ಕಾರದ ವೆಬ್‌ಸೈಟ್‌ಗಳ ದರ್ಶನ ಅಪರೂಪ, ಅಲ್ಲಿವರೆಗೆ ಪಿಂಚಣಿ ಸರ್ಕಾರಿ ಸೇವೆ ಪಡೆಯುವವರು ಯಾತನೆ ಹೇಳತೀರದು. ರಾತ್ರಿ ವೇಳೆ ಪಡಿತರ ವಿತರಣೆ: ತಾಲೂಕಿನಲ್ಲಿ ಪಡಿತರ ಆಹಾರ ಪಡೆಯಬೇಕೆಂದರೆ ಆಹಾರ ಮತ್ತು ನಾಗರಿಕ ಸೌಲಭ್ಯಗಳ ಇಲಾಖೆ ವೆಬ್ ಸೈಟ್‌ಗೆ ಪಡಿತರದಾರರು ಹೆಬ್ಬೆಟ್ಟು ನೀಡಬೇಕು. ಗ್ರಾಮೀಣ ಭಾಗದಲ್ಲಿ ಅಂತರ್ಜಾಲದ ಸಮಸ್ಯೆ ಹೆಚ್ಚಾಗಿರುವು ದಲ್ಲದೆ ಸರ್ಕಾರಿ ವೆಬ್‌ಸೈಟ್ ಸಕಾಲಕ್ಕೆ ತೆರೆದುಕೊಳ್ಳದೆ ಇರುವುದರಿಂದ ರಾತ್ರಿ 9 ಗಂಟೆ ಮೇಲೆ ನ್ಯಾಯಾಬೆಲೆ ಅಂಗಡಿ ಮಾಲಿಕರು ಹೆಬ್ಬೆಟ್ಟು ತೆಗೆದುಕೊಂಡು ಪಡಿತರ ಆಹಾರ ವಿತರಣೆ ಮಾಡುತ್ತಿದ್ದಾರೆ.
ನಿವೇಶನ, ಕೃಷಿ ಭೂಮಿ ಮಾರಾಟ ಮಾರುವವರು ತಮ್ಮ ಭೂಮಿ ಪಹಣಿ ಪಡೆಯಲು ದಿನಗಟ್ಟಲೆ ಕಾಯ ವಂತಾಗಿದೆ. ಸೈಬರ್ ಸೆಂಟರ್‌ಗಳಲ್ಲಿ ಸರ್ಕಾರಿ ವೆಬ್‌ಸೈಟ್ ಓಪನ್ ಆಗುತ್ತಿಲ್ಲ. ಇನ್ನು ಉಪನೋಂದಾವಣಿ ಅಧಿ ಕಾರಿಗಳ ಕಚೇರಿಯಲ್ಲಿ ದಿನಕ್ಕೆ ನೂರಾರು ಕ್ರಯ ವಾಗುತ್ತಿತ್ತು. ಚುನಾವಣೆ ಘೋಷಣೆ ಯಾದ ಮೇಲೆ ಇಂಟರ್ ನೆಟ್ ಸಮ ಸ್ಯೆಯಿಂದ ನೋಂದಾವಣೆ ತಡವಾಗುತ್ತಿದೆ. -ಕೇಶವಮೂರ್ತಿ, ಪತ್ರಬರಹಗಾರ
– ಶಾಮಸುಂದರ್ ಕೆ ಅಣ್ಣೇನಹಳ್ಳಿ