ಬಸವನಬಾಗೇವಾಡಿ: ಸರಕಾರದ ಕಾಯ್ದೆ ಅಡಿಯಲ್ಲಿ ಬರುವ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಮಾತ್ರ ಮಾರಾಟಮಾಡಬೇಕು. ಸರಕಾರದ ಕಾಯ್ದೆ ಬಿಟ್ಟು ನಿಷೇಧಿತ ಕೀಟನಾಶಕಗಳನ್ನುಮಾರಾಟ ಮಾಡಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಚ್. ಯರಝರಿ ಹೇಳಿದರು.
ಪಟ್ಟಣದ ಕೃಷಿ ಇಲಾಖೆ ಸಭಾ ಭವನದಲ್ಲಿ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕಿನ ಕೃಷಿ ಪರಿಕರ ವ್ಯಾಪಾರ ಮತ್ತು ರಸಗೊಬ್ಬರಮಾರಾಟ ಮಾಲೀಕರ ಸಭೆಯಲ್ಲಿಅವರು ಮಾತನಾಡಿದರು.ಮನುಷ್ಯ, ಮಣ್ಣು, ಪರಿಸರ ಸೇರಿದಂತೆಅನೇಕ ಜೀವರಾಶಿಗಳ ಬದುಕಿನವಿಚಾರವನ್ನು ಇಟ್ಟುಕೊಂಡು ಮತ್ತುಸರಕಾರ ಕಾಯ್ದೆ ಅಡಿಯಲ್ಲಿ ಬರುವಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಮಾತ್ರ ಮಾರಾಟ ಮಾಡಬೇಕು. ಅದನ್ನು ಹೊರತು ನೋಂದಣಿಯಿಲ್ಲದೇ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡಿದರೆ ಹಂತವರವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು.
ನಾವು ಮತ್ತು ನೀವು ರೈತರಿಗೆ ಅನುಕೂಲವಾಗುವಂತ ಕೇಲಸ ಮಾಡ ಬೇಕಾಗಿದೆ. ರೈತರಿಗೆ ಯಾವುದೇ ರೀತಿಬೀಜ, ರಸಗೊಬ್ಬರ, ಕೀಟನಾಶಕಗಳದಲ್ಲಿಅನ್ಯಾಯವಾಗದ ರೀತಿಯಲ್ಲಿ ನೋಡಿಕೊಳ್ಳಬೇಕಾದ ಕರ್ತವ್ಯ ನಮ್ಮದಾಗಿದೆ ಎಂದು ಹೇಳಿದರು.
ಕೃಷಿ ಪರಿಕರ ವ್ಯಾಪಾರಸ್ಥರು ಕಡ್ಡಾಯವಾಗಿ ತಮ್ಮ ಅಂಗಡಿಯಪರವಾಣಿಗೆ ಪತ್ರ (ಲೈಸನ್ಸ್) ಪಡೆದಿರಬೇಕು. ರೈತರು ಯಾವುದೇ ವಸ್ತು ಖರೀದಿಸಿದರೆ ರಸೀದಿ ನೀಡಬೇಕು.ರೈತರಿಂದ ನಗದು ಹಣ ಪಡೆಯುವಕ್ಕಿಂತ ಫೋನ್ ಪೇ, ಗೂಗಲ್ ಪೇ ಸೇರಿದಂತೆಅನೇಕರ ಡಿಜಿಟಲ್ ಮೂಲಕ ವ್ಯಾಪಾರವಹಿವಾಟ ಮಾಡಬೇಕು. ತಮ್ಮ ಅಂಗಡಿಯಲ್ಲಿ ದಿನನಿತ್ಯ ರೇಟ್ ಬೋಡ್ ಸ್ಟಾಕ್ ಬುಕ್ ಸೇರಿದಂತೆ ಎಲ್ಲವು ಕಾನೂನು ಬದ್ಧವಾಗಿ ಇರಬೇಕು. ಇಲ್ಲವಾದಲ್ಲಿ ಅಪರಾಧಕ್ಕೆ ಒಳಗಾಗುತ್ತದೆಮತ್ತು ರೈತರು ತಮ್ಮಲ್ಲಿ ಖರೀದಿಸಿದ ವಸ್ತುಗಳ ಬಗ್ಗೆ ಸಹಿ ಪಡೆದಿರಬೇಕು ಎಂದು ಹೇಳಿದರು.
ರೈತರಲ್ಲಿ ನಾವು ನೀವು ಸೇರಿ ಜಾಗೃತಿಮೂಢಿಸುವ ಕೆಲಸ ಮಾಡಿ ರೈತರ ಸೇವೆ ಮಾಡಬೇಕು. ರೈತರು ತಮ್ಮ ಬೆಳೆಗಳಿಗೆ ಕಿಟನಾಶಕಗಳಿಗಿಂತ ಸಾವಯವ ಕೃಷಿಯ ಬೆಳೆಯುವ ಬಗ್ಗೆ ರೈತರಲ್ಲಿ ಮನದಟ್ಟು ಮಾಡಬೇಕು ಎಂದು ಹೇಳಿದರು. ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಚಿದಾನಂದ ಹಿರೇಮಠ, ತಾಲೂಕುಕೃಷಿ ಪರಿಕರ ವ್ಯಾಪಾರಸ್ಥರ ಸಂಘದ ತಾಲೂಕಾಧ್ಯಕ್ಷ ಅಶೋಕ ಕಲ್ಲೂರ ಭಾಗವಹಿಸಿದ್ದರು.