Advertisement
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸದ್ಯ ಈ ಲಸಿಕೆ ಪ್ರಯೋಗದ ವಿವಿಧ ಹಂತಗಳಲ್ಲಿ ಇದೆ. ಅದೃಷ್ಟವಶಾತ್ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರುವಂಥ ಅಂಶ ಕಂಡುಬಂದಿಲ್ಲ. ಇದರ ಹೊರತಾಗಿಯೂ ಮುಂದಿನ ಆರು ತಿಂಗಳಲ್ಲಿ ಮಕ್ಕಳಿಗಾಗಿ ನಮ್ಮ ಸಂಸ್ಥೆ ಸಂಶೋಧಿಸಿರುವ ಕೊವೊವ್ಯಾಕ್ಸ್ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇನ್ನೂ ನಾಲ್ಕು ಒಮಿಕ್ರಾನ್ ರೂಪಾಂತರಿ ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ, ಅಲ್ಲಿ ಈವರೆಗೆ ಒಟ್ಟು 6 ಕೇಸುಗಳು ದೃಢಪಟ್ಟಿವೆ. ಹೊಸತಾಗಿ ಸೋಂಕು ದೃಢಪಟ್ಟವರಿಗೆ ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ, ರಾಜಸ್ಥಾನದಲ್ಲಿ ಹೊಸತಾಗಿ ಏಳು ಹೊಸ ರೂಪಾಂತರಿ ಕೇಸುಗಳು ದೃಢಪಟ್ಟಿವೆ. ಹೀಗಾಗಿ, ದೇಶದಲ್ಲಿನ ಒಟ್ಟು ಕೇಸುಗಳ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.
Related Articles
Advertisement
ತಜ್ಞರ ಜತೆಗೆ ಕೇಂದ್ರ ಚರ್ಚೆ:ದೇಶದಲ್ಲಿ ಸೋಂಕಿನ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ನೀಡಬೇಕೋ ಬೇಡವೋ ಎಂಬ ಬಗ್ಗೆ ತಜ್ಞರ ಜತೆಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಈ ನಡುವೆ ದೇಶದ ಶೇ.55 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. ಶೇ.70ರಷ್ಟು ಕಡಿತ:
ಫೈಜರ್-ಬಯಾನ್‌ಟೆಕ್‌ನ ಲಸಿಕೆ ಹಾಕಿಸಿಕೊಂಡರೆ ಒಮಿಕ್ರಾನ್ ರೂಪಾಂತರಿ ಸೋಂಕು ದೃಢಪಟ್ಟರೂ ಶೇ.70ರಷ್ಟು ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿರುವ ಅಧ್ಯಯನದಲ್ಲಿ ಈ ಅಂಶ ದೃಢಪಟ್ಟಿದೆ. ಅಲ್ಲದೆ, ಫೈಜರ್ ಮಾತ್ರೆಗಳಿಂದ ಶೇ. 90ರಷ್ಟು ಒಮಿಕ್ರಾನ್ ಸೋಂಕನ್ನು ತಡೆಯಬಲ್ಲದು ಎಂಬುದು ಸಾಬೀತಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.