Advertisement
ಮಾಲಿನ್ಯ ಮಟ್ಟವನ್ನು ಸೂಚಿಸುವಂಥ ಸರ್ಕಾರಿ ಸ್ವಾಮ್ಯದ ವಾಯು ಗುಣಮಟ್ಟ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ(ಸಫರ್)ಯು ಕಡು ಕಂದುಬಣ್ಣಕ್ಕೆ ತಿರುಗುವ ಮೂಲಕ, ದೆಹಲಿಯಲ್ಲಿ ವಾಯು ಮಾಲಿನ್ಯದ ಗಂಭೀರತೆಯನ್ನು ಪರಿಚಯಿ ಸಿತು. ಈ ಪರಿಯ ವಾಯುಮಾಲಿನ್ಯವು ಉಸಿರಾಟದ ಮತ್ತು ಹೃದಯಸಂಬಂಧಿ ಸಮಸ್ಯೆ ಉಳ್ಳವರಿಗೆ ಮಾತ್ರವಲ್ಲ ಆರೋಗ್ಯ ವಂತರ ದೇಹದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ, ಸಮಾಧಾನದ ವಿಷಯವೆಂದರೆ, ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಪಟಾಕಿಗಳ ಸದ್ದು, ಮಾಲಿನ್ಯ ಸ್ವಲ್ಪಮಟ್ಟಿಗೆ ಕಡಿಮೆಯೇ ಇತ್ತು. ಕಳೆದ ವರ್ಷ ದಾಖಲಾದ ಮಾಲಿನ್ಯ ಪ್ರಮಾಣವು ಕನಿಷ್ಠ 3 ದಶಕಗಳಲ್ಲೇ ಅತ್ಯಂತ ಹೆಚ್ಚಿನದ್ದಾಗಿತ್ತು.
ದೆಹಲಿಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ರಾತ್ರಿಯ ಅವಧಿಯಲ್ಲಿ ಬೆಂಕಿ ಸಂಬಂಧಿ ಅವಘಡಗಳ ಕುರಿತು ಸುಮಾರು 204 ಕರೆಗಳು ಬಂದಿದ್ದು, ಈ ಪೈಕಿ 51 ಕರೆಗಳು ಪಟಾಕಿ ದುರಂತ ಗಳದ್ದೇ ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 243 ಕರೆಗಳು ಬಂದಿದ್ದವು ಎಂದೂ ಅವರು ಹೇಳಿದ್ದಾರೆ.