Advertisement

ಸರಣಿ ನಿಕಾಹ್‌ ಹಲಾಲಾ

12:30 AM Feb 08, 2019 | |

ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಮಹಿಳೆಯೊಬ್ಬರು ನಿಕಾಹ್‌ ಹಲಾಲಾ ಮಾಡಿಸಿಕೊಳ್ಳುವಂತೆ ಬಲವಂತಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪತಿ ತ್ರಿವಳಿ ತಲಾಖ್‌ ನೀಡಿದ ಬಳಿಕ ಮಾವನೊಂದಿಗೆ ಬಲವಂತವಾಗಿ ಮದುವೆ ಮಾಡಲಾಗಿತ್ತು. ಪತಿಯ ಸೋದರನ ಜತೆಗೂ ಮದುವೆ ಮಾಡಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

Advertisement

2009ರ ಜುಲೈನಲ್ಲಿ ಮಹಿಳೆಗೆ ವಿವಾಹ ಆಗಿತ್ತಾದರೂ, 2011ರಲ್ಲಿ ಪತಿ ತ್ರಿವಳಿ ತಲಾಖ್‌ ನೀಡಿದ್ದ. ಕುಟುಂಬದವರು ಪುನಃ ಆಕೆಯನ್ನು ವಿವಾಹವಾಗುವಂತೆ ಬಲವಂತಪಡಿಸಿದ ನಂತರ ನಿಕಾಹ್‌ ಹಲಾಲಾ ಮಾಡಿಸಿಕೊಂಡರೆ ಮಾತ್ರ ವಿವಾಹವಾಗುವುದಾಗಿ ಹೇಳಿದ್ದ. ಇದಕ್ಕೆ ಮಹಿಳೆ ಒಪ್ಪದೇ ಇದ್ದಾಗ, ಆಕೆಗೆ ಮತ್ತು ಬರುವ ಚುಚ್ಚುಮದ್ದು ನೀಡಿ ಬಲವಂತವಾಗಿ ಮಾವನೊಂದಿಗೆ ವಿವಾಹ ಮಾಡಿಸಲಾಗಿದೆ ಎಂದು ಮಹಿಳೆಯ ಸೋದರಿ ದೂರು ನೀಡಿದ್ದಾರೆ. ಈ ಸಂಬಂಧ ಆಕೆಯ ಪತಿ ಹಾಗೂ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next