Advertisement

Thief: ಒಂದೇ ಕಟ್ಟಡದ ಐದು ಅಂಗಡಿಗಳಲ್ಲಿ ಸರಣಿ ಕಳ್ಳತನ… CCTV ಯಲ್ಲಿ ಸೆರೆಯಾಯ್ತು ದೃಶ್ಯ

01:03 PM Jun 27, 2024 | Team Udayavani |

ಗುಡಿಬಂಡೆ: ತಾಲೂಕಿನ ಬೀಚಗಾನಹಳ್ಳಿ ಕ್ರಾಸ್‌ನ ಬಳಿ ಒಂದೇ ಕಟ್ಟಡದ ಐದು ಅಂಗಡಿಗಳಲ್ಲಿ ಗುರುವಾರ ಬೆಳಿಗಿನ ಜಾವ ಸುಮಾರು 2.30 ರ ಸಮಯದಲ್ಲಿ ಸರಣಿ ಕಳ್ಳತನವಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Advertisement

ತಾಲೂಕಿನ ಬೀಚಗಾನಹಳ್ಳಿ ಕ್ರಾಸ್‌ನ ಬಳಿ ತಡ ರಾತ್ರಿ ಯುವಕರ ಗುಂಪೊಂದು ಒಂದೇ ಕಟ್ಟಡದಲ್ಲಿನ ಐದು ಅಂಗಡಿಗಳಲ್ಲಿನ ತರಕಾರಿ, ಮೊಬೈಲ್, ಬ್ಯಾಂಕ್ ಮಿತ್ರ, ಸೂಪರ್ ಮಾಕ್ರೆಟ್ ಗಳಲ್ಲಿ ಕಳ್ಳತನ ಮಾಡಿದ್ದು, ಕಳ್ಳತನ ಮಾಡುವ ವಿಡಿಯೋ ಮೊಬೈಲ್ ಅಂಗಡಿಯಲ್ಲಿನ ಸಿಸಿ ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಸಿ ಟಿ.ವಿ. ಕ್ಯಾಮೆರಾದಲ್ಲಿನ ವಿಡಿಯೋದಲ್ಲಿ ಮೂರು ಜನ ಯುವಕರು ಸುಮಾರು 20 ವರ್ಷದ ಅಸುಪಾಸಿನ ಯುವಕರು ಅಂಗಡಿ ಶೆಟರ್‌ನ ಬೀಗ ಮುರಿದು ಒಳ ನುಗ್ಗಿ ಟೇಬಲ್ ಚೆಕ್ ಮಾಡಿ, ಹಣ ದೋಚಿ, ಮೊಬೈಲ್ ಇತರೆ ಸಣ್ಣ ಪುಟ್ಟ ವಸ್ತುಗಳನ್ನು ದೋಚುತ್ತಿರುವ ದೃಶ್ಯ ಚಿತ್ರೀಕರಣವಾಗಿದ್ದು, ಕಳ್ಳರ ಮುಖಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಬ್ಯಾಂಕ್ ಮಿತ್ರ ಅಂಗಡಿಯಲ್ಲಿ ಎಲ್ಲಾ ಹುಡುಕಾಡಿ ಏನು ಸಿಗದ ಕಾರಣ ಲ್ಯಾಪ್ ಟಾಪ್ ಹೊಡೆದು ಹಾಕಿದ್ದು, ತರಕಾರಿ ಅಂಗಡಿಯಲ್ಲಿ ಸ್ವಲ್ಪ ಹಣ ಮತ್ತು ಹಣ ಹಾಕುತ್ತಿದ್ದು ಹುಂಡಿ, ಸೂಪರ್ ಮಾಕೆರ್ಟ್‌ನಲ್ಲಿ ಸ್ವಲ್ಪ ಹಣ ಕಳುವಾಗಿದೆ ಎಂದು ತಿಳಿದು ಬಂದಿದ್ದು, ಪ್ರತಿಯೊಂದು ಅಂಗಡಿಯಲ್ಲೂ ಎಷ್ಟು ಕಳುವಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದ್ದು, ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: CBI ಕಸ್ಟಡಿಯಲ್ಲಿರುವ ಕೇಜ್ರಿವಾಲ್ ಗೆ ಮನೆ ಅಡುಗೆ ಸೇರಿದಂತೆ ಹಲವು ವಿನಾಯಿತಿ ನೀಡಿದ ಕೋರ್ಟ್

Advertisement
Advertisement

Udayavani is now on Telegram. Click here to join our channel and stay updated with the latest news.

Next