Advertisement

Nyamathi ಪಟ್ಟಣದ ಹಲವೆಡೆ ಸರಣಿ ಕಳ್ಳತನ; ನಾಲ್ವರಲ್ಲಿ ಇಬ್ಬರು ಆರೋಪಿಗಳ ಬಂಧನ, ಸ್ವತ್ತು ವಶ

03:10 PM Sep 04, 2024 | Team Udayavani |

ಚನ್ನಗಿರಿ: ನ್ಯಾಮತಿ ಪಟ್ಟಣ ಸುರುವೂನ್ನೇ, ಗಂಜೀನಹಳ್ಳಿ, ಚಟ್ನಹಳ್ಳಿ, ಗ್ರಾಮಗಳಲ್ಲಿ ಕಳೆದ ಜುಲೈ, ಆಗಸ್ಟ್ ತಿಂಗಳಲ್ಲಿ ಸರಣಿ ಕಳ್ಳತನ ನಡೆದಿದ್ದವು.

Advertisement

ನ್ಯಾಮತಿ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ, ಕಳ್ಳತನ ಮಾಡಿದಾತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಚನ್ನಗಿರಿ ಡಿ.ಓ.ಎಸ್.ಪಿ. ರುದ್ರಪ್ಪ ಎಸ್. ಉಜ್ಜನ ಕೊಪ್ಪ ತಿಳಿಸಿದರು.

ಸರಣಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು 2 ಆರೋಪಿಗಳನ್ನು ಬಂಧಿಸಿ, ಸ್ವತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಚನ್ನಗಿರಿ ಡಿ.ಓ.ಎಸ್.ಪಿ. ರುದ್ರಪ್ಪ ಎಸ್. ಉಜ್ಜನಕೊಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನ್ಯಾಮತಿ ಪೊಲೀಸ್ ಠಾಣೆಯಲ್ಲಿ 8 ಮನೆಗಳ್ಳತನ ಪ್ರಕರಣಗಳು ವರದಿಯಾಗಿದ್ದು, ಇದನ್ನು ಮನಗೊಂಡು ಎಸ್.ಪಿ. ಉಮಾ ಪ್ರಶಾಂತ್ ದಾವಣಗೆರೆ ಹಾಗೂ ಹೆಚ್ಚುವರಿ ಪೊಲೀಸ್ ಅಧ್ಯಕ್ಷ ವಿಜಯಕು‌ ಮಾರ್, ಎಂ.ಸಂತೋಷ್, ಮಂಜುನಾಥ್ ಕೆ.ಎಸ್.ಪಿ.ಎಸ್. ಅವರ ಮಾರ್ಗದರ್ಶನದಲ್ಲಿ ಈ ಪ್ರಕರಣಗಳ ಪತ್ತೆ ಕಾರ್ಯ ನಡೆದಿದೆ.

ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಎನ್.ಎಸ್. ನೇತೃತ್ವದಲ್ಲಿ ಪಿಎಸ್ಐ ಜಯಪ್ಪನಾಯ್ಕ್ ಮತ್ತು  ಸಿಬ್ಬಂದಿಗಳ ತಂಡ ರಚನೆ ಮಾಡಿ ತನಿಖೆ ಕೈಗೊಂಡು ಆರೋಪಿತರ ಪತ್ತೆಗೆ ಸತತ ಪ್ರಯತ್ನ ನಡೆದಿದೆ.

Advertisement

ಈ ಪರಿಣಾಮ ಸೆ.1ರ ಭಾನುವಾರ ಚಿಕ್ಕಬೆನ್ನೂರು ಗ್ರಾಮದ ಸಂತೆಬೆನ್ನೂರು ಹೋಬಳಿಯ ಚನ್ನಗಿರಿ ತಾಲೂಕಿನ ನಿವಾಸಿ, ಕೂಲಿ ಕೆಲಸ ಮಾಡಿಕೊಂಡಿದ್ದ ರಾಮಾ ಅಲಿಯಾಸ್ ಬುಡ್ಡ ರಾಮ (40ವ), ಚೆನ್ನಗಿರಿ ತಾಲೂಕಿನ ಮಾವಿನಕಟ್ಟೆ ನಿವಾಸಿ ಕೂಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಟಿ. (48 ವ) ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಆರೋಪಿಗಳ ವಿಚಾರಣೆ ವೇಳೆ ಧನಂಜಯ ಹಾಗೂ ಮುಕೇಶ್ ಇವರಿಬ್ಬರ ಜೊತೆ ಸೇರಿಕೊಂಡು 4 ಜನ ತಂಡ ಮಾಡಿಕೊಂಡು ಜುಲೈ, ಆಗಸ್ಟ್ ತಿಂಗಳಲ್ಲಿ ನ್ಯಾಮತಿ ಪಟ್ಟಣ ಸುರುವನ್ನೇ, ಗಂಜೀನಹಳ್ಳಿ, ಚಟ್ನಳ್ಳಿ ಗ್ರಾಮಗಳಲ್ಲಿ ಮನೆಗಳ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

ಇವರಿಂದ 8 ಮನೆಗಳಲ್ಲಿ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 80 ಗ್ರಾಂ ಚಿನ್ನ ಹಾಗೂ 810 ಗ್ರಾಂ ಬೆಳ್ಳಿ ಸೇರಿದಂತೆ ಎಲ್ಲಾ ಆಭರಣಗಳನ್ನು ವಸಪಡಿಸಿಕೊಳ್ಳಲಾಗಿದೆ. ಅವುಗಳ ಒಟ್ಟು ಮೌಲ್ಯ ಸುಮಾರು 6,20,000 ಆಗಿರಬಹುದು ಎಂದು  ಅಂದಾಜಿಸಲಾಗಿದೆ.

ಬಂಧಿತ ಆರೋಪಿಗಳಾದ ರಾಮ ಮತ್ತು ಸಂತೋಷ್ ಅವರನ್ನು ಹಾಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಎಸ್‌.ಪಿ. ಉಮಾ ಪ್ರಶಾಂತ್, ಅಡಿಷನಲ್ ಎಸ್.ಪಿ. ವಿಜಯಕುಮಾರ್, ಎಂ. ಸಂತೋಷ್, ಮಂಜುನಾಥ್ ಕೆ.ಎಸ್.ಪಿ.ಎಸ್. ಮತ್ತು ರುದ್ರಪ್ಪ ಎಸ್. ಉಜ್ಜನ ಕೊಪ್ಪ ಚನ್ನಗಿರಿ ಉಪವಿಭಾಗ ಚನ್ನಗಿರಿರವರು ನ್ಯಾಮತಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪತ್ತೆ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next