Advertisement
ನ್ಯಾಮತಿ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸಿ, ಕಳ್ಳತನ ಮಾಡಿದಾತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಚನ್ನಗಿರಿ ಡಿ.ಓ.ಎಸ್.ಪಿ. ರುದ್ರಪ್ಪ ಎಸ್. ಉಜ್ಜನ ಕೊಪ್ಪ ತಿಳಿಸಿದರು.
Related Articles
Advertisement
ಈ ಪರಿಣಾಮ ಸೆ.1ರ ಭಾನುವಾರ ಚಿಕ್ಕಬೆನ್ನೂರು ಗ್ರಾಮದ ಸಂತೆಬೆನ್ನೂರು ಹೋಬಳಿಯ ಚನ್ನಗಿರಿ ತಾಲೂಕಿನ ನಿವಾಸಿ, ಕೂಲಿ ಕೆಲಸ ಮಾಡಿಕೊಂಡಿದ್ದ ರಾಮಾ ಅಲಿಯಾಸ್ ಬುಡ್ಡ ರಾಮ (40ವ), ಚೆನ್ನಗಿರಿ ತಾಲೂಕಿನ ಮಾವಿನಕಟ್ಟೆ ನಿವಾಸಿ ಕೂಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಟಿ. (48 ವ) ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಆರೋಪಿಗಳ ವಿಚಾರಣೆ ವೇಳೆ ಧನಂಜಯ ಹಾಗೂ ಮುಕೇಶ್ ಇವರಿಬ್ಬರ ಜೊತೆ ಸೇರಿಕೊಂಡು 4 ಜನ ತಂಡ ಮಾಡಿಕೊಂಡು ಜುಲೈ, ಆಗಸ್ಟ್ ತಿಂಗಳಲ್ಲಿ ನ್ಯಾಮತಿ ಪಟ್ಟಣ ಸುರುವನ್ನೇ, ಗಂಜೀನಹಳ್ಳಿ, ಚಟ್ನಳ್ಳಿ ಗ್ರಾಮಗಳಲ್ಲಿ ಮನೆಗಳ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.
ಇವರಿಂದ 8 ಮನೆಗಳಲ್ಲಿ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 80 ಗ್ರಾಂ ಚಿನ್ನ ಹಾಗೂ 810 ಗ್ರಾಂ ಬೆಳ್ಳಿ ಸೇರಿದಂತೆ ಎಲ್ಲಾ ಆಭರಣಗಳನ್ನು ವಸಪಡಿಸಿಕೊಳ್ಳಲಾಗಿದೆ. ಅವುಗಳ ಒಟ್ಟು ಮೌಲ್ಯ ಸುಮಾರು 6,20,000 ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳಾದ ರಾಮ ಮತ್ತು ಸಂತೋಷ್ ಅವರನ್ನು ಹಾಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಎಸ್.ಪಿ. ಉಮಾ ಪ್ರಶಾಂತ್, ಅಡಿಷನಲ್ ಎಸ್.ಪಿ. ವಿಜಯಕುಮಾರ್, ಎಂ. ಸಂತೋಷ್, ಮಂಜುನಾಥ್ ಕೆ.ಎಸ್.ಪಿ.ಎಸ್. ಮತ್ತು ರುದ್ರಪ್ಪ ಎಸ್. ಉಜ್ಜನ ಕೊಪ್ಪ ಚನ್ನಗಿರಿ ಉಪವಿಭಾಗ ಚನ್ನಗಿರಿರವರು ನ್ಯಾಮತಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪತ್ತೆ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.