Advertisement

Serial killer: ಸರಣಿ ಕೊಲೆಗಾರನಿಗೆ ಜೀವಾವಧಿ ಶಿಕ್ಷೆ

12:30 AM May 26, 2023 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ 30 ಅಪ್ರಾಪೆ¤ಯರ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಸೈಕೋಪಾತ್‌, ಸರಣಿ ಕೊಲೆಗಾರ ರವೀಂದ್ರ ಕುಮಾರ್‌ಗೆ, ದಿಲ್ಲಿಯ ರೋಹಿಣಿ ಕೋರ್ಟ್‌ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. 2015ರಲ್ಲಿ ಮಕ್ಕಳ ಅಪಹರಣ ಮತ್ತು ಅತ್ಯಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ರವೀಂದ್ರನನ್ನು ಬಂಧಿಸಲಾಗಿತ್ತು. ಆ ಬಳಿಕ ಜನರನ್ನು ಬೆಚ್ಚಿಬೀಳಿಸುವ ಸಂಗತಿಗಳು ಹೊರಬಿದ್ದಿದ್ದವು. ಪೊಲೀಸರ ಪ್ರಕಾರ 2008 ರಿಂದ 2015ರ ವರೆಗೆ ರವೀಂದ್ರ 30 ಮಕ್ಕಳನ್ನು ಅತ್ಯಾಚಾರವೆಸಗಿ ಹತ್ಯೆಗೈದಿದ್ದು, ಆ ಪೈಕಿ ಹಿರಿಯ ಮಗುವಿನ ವಯಸ್ಸು 12 ಹಾಗೂ ಕಿರಿಯ ಮಗುವಿನ ವಯಸ್ಸು ಕೇವಲ 2 ವರ್ಷವೆಂದು ಬಹಿರಂಗಪಡಿಸಿದ್ದ. ಅಲ್ಲದೇ ತನಗೆ 19 ವರ್ಷ ವಯಸ್ಸಿದ್ದಾಗ ಮೊದಲ ಅಪರಾಧ ಎಸಗಿದ್ದಾಗಿಯೂ ತಿಳಿಸಿದ್ದ. ಪ್ರಸ್ತುತ 6 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ್ದ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next