Advertisement
ಕಾಪುವಿನಿಂದ ಪಾಂಗಾಳದವರೆಗೆ ಬಂದು ಮರಳಿ ಕಾಪುವಿಗೆ ತೆರಳಲು ಅಣಿಯಾಗುತ್ತಿದ್ದ ಡ್ರೈವಿಂಗ್ ಸ್ಕೂಲ್‌ನ ಕಾರು, ಡೈವರ್ಷನ್ ಬಳಿ ತಿರುಗಲು ಸಿದ್ಧವಾಗಿದ್ದ ನವಯುಗ್ ಕಂಪೆನಿಯ ಸಿಮೆಂಟ್ ರೆಡಿಮಿಕ್ಸರ್ ಲಾರಿ ಮತ್ತು ಅವುಗಳ ಮಧ್ಯದಲ್ಲಿ ತೂರಿ ಬಂದ ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ತಾ.ಪಂ.ಸದಸ್ಯ ರಾಜೇಶ್ ಶೆಟ್ಟಿ ನೇತೃತ್ವದಲ್ಲಿ ಸ್ಥಳೀಯರು ಸೇರಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ಸಂಚಾರವನ್ನು ಸುಗಮಗೊಳಿಸಲು ಸಹಕರಿಸಿದರು.
ಕಾಪು ಎಸ್‌ಐ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಮಧ್ಯದಲ್ಲಿದ್ದ ವಾಹನಗಳನ್ನು ತೆರವುಗೊಳಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.