ಮ್ಯಾಡ್ರಿಡ್ (ಸ್ಪೇನ್): ಸ್ಪೇನ್‌ನ ಡಿಫೆಂಡರ್ ಸರ್ಗಿಯೊ ರಮೋಸ್ ಯುರೋಪಿಯನ್ ಫುಟ್‌ಬಾಲ್ ನಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ದಾಖಲೆ ಸ್ಥಾಪಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು ಇಟಲಿಯ ಗೋಲ್‌ಕೀಪರ್ ಗಿಯಾನ್‌ಲಿಗಿ ಬುಫಾನ್ ದಾಖಲೆಯನ್ನು ಮುರಿದರು. ಸ್ಪೇನ್-ಸ್ವಿಜರ್‌ಲ್ಯಾಂಡ್ ನಡುವಿನ ನೇಶನ್ಸ್ ಲೀಗ್ ಪಂದ್ಯದ ವೇಳೆ ರಮೋಸ್ ಈ ದಾಖಲೆ ಬರೆದರು. ಇದು ಅವರ 177ನೇ ಪಂದ್ಯವಾಗಿದೆ. ಪಂದ್ಯ 1-1 ಅಂತರದಿಂದ ಡ್ರಾಗೊಂಡಿತು.
ಇದನ್ನೂ ಓದಿ:ಕೋವಿಡ್ : ಟಿ20 ವಿಶ್ವಕಪ್ ಆಡಬೇಕಿದ್ದ ಅಂತಾರಾಷ್ಟ್ರೀಯ ಕ್ರಿಕೆಟಿಗ ; ಇಂದು ಡೆಲಿವರಿ ಬಾಯ್.!
2005ರಲ್ಲಿ ಮೊದಲ ಸಲ ಸ್ಪೇನ್ ರಾಷ್ಟ್ರೀಯ ತಂಡದ ಪರ ಆಡಲಿಳಿದಾಗ ಸರ್ಗಿಯೊ ರಮೋಸ್‌ಗೆ ಕೇವಲ 18 ವರ್ಷವಾಗಿತ್ತು. ಆಗ ಅವರು ಸ್ಪೇನ್ ತಂಡವನ್ನು ಪ್ರತಿನಿಧಿಸಿದ ಅತೀ ಕಿರಿಯ ಆಟಗಾರನೆಂಬ ದಾಖಲೆಗೂ ಪಾತ್ರರಾಗಿದ್ದರು.
ಸರ್ಗಿಯೊ ರಮೋಸ್ ರಿಯಲ್ ಮ್ಯಾಡ್ರಿಡ್ ತಂಡದ ಪ್ರಮುಖ ಆಟಗಾರನೂ ಆಗಿದ್ದಾರೆ. ಈ ಕ್ಲಬ್ ಪರ 100 ಗೋಲು ಹೊಡೆದ ದಾಖಲೆ ರಮೋಸ್ ಅವರದು. ಸ್ಪೇನ್ ಪರ 23 ಗೋಲು ಹೊಡೆದಿದ್ದಾರೆ.