Advertisement
33 ವರ್ಷದ ಎಗ್ವೆರೊ ಅ. 30ರ ಸ್ಪ್ಯಾನಿಶ್ ಲೀಗ್ ಪಂದ್ಯದ ವೇಳೆ ಹೃದಯ ಬೇನೆಯಿಂದ ಎದೆ ಹಿಡಿದುಕೊಂಡೇ ಅಂಗಳ ತ್ಯಜಿಸಿದ್ದರು. ಆಸ್ಪತ್ರೆಗೆ ದಾಖಲಾಗಿ ಹೃದಯ ತಪಾಸಣೆ ಮಾಡಿಕೊಂಡಾಗ ಪರಿಸ್ಥಿತಿ ತುಸು ಗಂಭೀರವಾಗಿರುವುದು ಅರಿವಿಗೆ ಬಂದಿತ್ತು. ಇದಕ್ಕೆ ಕಾಲಕಾಲಕ್ಕೆ ತಪಾಸಣೆ ಹಾಗೂ ಸುದೀರ್ಘ ವಿಶ್ರಾಂತಿ ಸೂಚಿಸಲಾಗಿತ್ತು. ಮತ್ತೆಂದೂ ಫುಟ್ ಬಾಲ್ ಆಡಲು ಸಾಧ್ಯವಾಗದು ಎಂದು 10 ದಿನಗಳ ಹಿಂದೆಯೇ ತಿಳಿಸಿದ್ದರು. ಬುಧವಾರ ಕಣ್ಣೀರು ಸುರಿಸುತ್ತಲೇ ಫುಟ್ ಬಾಲ್ ವಿದಾಯ ಘೋಷಿಸಿದರು.
Related Articles
Advertisement