Advertisement

ವ್ಯಾನಿಟಿ ಕವರ್‌ನಲ್ಲಿ ಮುಖಪುಟದಲ್ಲಿ ಬೆತ್ತಲಾದ ಗರ್ಭಿಣಿ ಸೆರೆನಾ

03:35 AM Jun 29, 2017 | Team Udayavani |

ನ್ಯೂಯಾರ್ಕ್‌: ವ್ಯಾನಿಟಿ ಕವರ್‌ ನಿಯತಕಾಲಿಕೆ ಮುಖಪುಟದಲ್ಲಿ ಖ್ಯಾತ ಟೆನಿಸ್‌ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗರ್ಭಿಣಿ ಸರೆನಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಅಮೆರಿಕದ ಖ್ಯಾತ  ಮಹಿಳಾ ಛಾಯಾಚಿತ್ರಗ್ರಾಹಕಿ ಆನಿ ಲಿಬೊವಿಟ್ಜ್ ಸೆರೆನಾ ಬೆತ್ತಲೆ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಸ್ವತಃ ಈ ವಿಷಯವನ್ನು ಟ್ವೀಟರ್‌ನಲ್ಲಿ ಸೆರೆನಾ ಪ್ರಕಟಿಸಿದ್ದಾರೆ. ಮಾತ್ರವಲ್ಲ ಇಂದು ಗಂಡು ಮಗುವಾ? ಅಥವಾ ಹೆಣ್ಣು ಮಗುವಾ? ಇದನ್ನು ತಿಳಿಯಲು ನಾನು ಕುತೂಹಲಭರಿತಳಾಗಿದ್ದೇನೆ ಎಂದು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದಾರೆ.

Advertisement

ಒಳಗಿನ ಪುಟಗಳಲ್ಲಿ 23 ಬಾರಿ ಮಹಿಳಾ ಸಿಂಗಲ್ಸ್‌ ಗ್ರ್ಯಾನ್‌ ಸ್ಲಾಮ್‌ ಗೆದ್ದಿರುವ ಸೆರೆನಾ ಅವರು ತಮ್ಮ ಪತಿ ಅಲೆಕ್ಸಿಸ್‌ ಒಹಿಯನ್‌ ಜತೆಗೆ ಕಳೆದಿರುವ ಸವಿ ಕ್ಷಣಗಳ ಬಗ್ಗೆ ಬರೆದುಕೊಂಡಿದ್ದಾರೆ. ತಾನು ಗರ್ಭಿಣಿ ಅನ್ನುವುದನ್ನು ಖಚಿತಪಡಿಸಿಕೊಂಡಿದ್ದು ಹೇಗೆ? ಖಚಿತಗೊಂಡ ನಂತರ ಮಾಡಿದ್ದೇನು? ಎನ್ನುವ ಕುತೂಹಲಭರಿತ ವಿಷಯಗಳ ಬಗ್ಗೆ ಬರೆಯಲಾಗಿದೆ.

ವಿಶೇಷವೆಂದರೆ ಈ ವರ್ಷಾರಂಭದಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್‌ಗೂ ಮುಂಚೆಯೇ ಸೆರೆನಾಗೆ ತಾನು ಗರ್ಭಿಣಿ ಎಂದು ಗೊತ್ತಾಗಿತ್ತಂತೆ. ಆಗ ವೈದ್ಯರನ್ನು ಸಂಪರ್ಕಿಸಿ ತಾನು ಆಡಬಹುದೇ ಎಂದು ಕೇಳಿಕೊಂಡಿದ್ದರಂತೆ. ವೈದ್ಯರು ಭ್ರೂಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಆಡಬಹುದು ಎಂದು ಖಚಿತಪಡಿಸಿದ ನಂತರವೇ ಸೆರೆನಾ ಆಡುವ ನಿರ್ಧಾರ ಮಾಡಿದರಂತೆ.

Advertisement

Udayavani is now on Telegram. Click here to join our channel and stay updated with the latest news.

Next