Advertisement

ಆಸ್ಟ್ರೇಲಿಯಾ ಓಪನ್ : ಸೆರೆನಾ ವಿಲಿಯಮ್ಸ್ ಗೆ ಸೋಲಿನ ಶಾಕ್ ನೀಡಿದ ವಾಂಗ್ ಕ್ವಿಯಾಂಗ್

10:10 AM Jan 25, 2020 | Hari Prasad |

ಮೆಲ್ಬೊರ್ನ್: ಏಳು ಬಾರಿಯ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ವಿಜೇತೆ ಸೆರೆನಾ ವಿಲಿಯಮ್ಸ್ ಅವರನ್ನು ಮಹಿಳೆಯರ ಸಿಂಗಲ್ಸ್ ನಲ್ಲಿ ಮೂರನೇ ಸುತ್ತಿನಲ್ಲಿ ಕೆಡಹುವ ಮೂಲಕ ಚೀನಾದ ಟೆನ್ನಿಸ್ ಆಟಗಾರ್ತಿ ವಾಂಗ್ ಕ್ವಿಯಾಂಗ್ ಅವರು ಆಸ್ಟ್ರೇಲಿಯಾ ಓಪನ್ ಕೂಟದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ.

Advertisement

ವಿಶ್ವದ 29ನೇ ಶ್ರೇಯಾಂಕದ ವಾಂಗ್ ಗೆ 6-4, 7-6, 7-5 ಸೆಟ್ ಗಳಲ್ಲಿ ಶರಣಾಗುವ ಮೂಲಕ 23 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ವಿಜೇತೆ ವಿಶ್ವದ 09ನೇ ಶ್ರೇಯಾಂಕಿತೆ ಸೆರೆನಾ ಈ ಪ್ರತಿಷ್ಠಿತ ಕೂಟದ ಮೂರನೇ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಸೆರೆನಾ ವಿರುದ್ಧದ ಈ ಬಿಗ್ ಮ್ಯಾಚ್ ನಲ್ಲಿ ಮೊದಲ ಸೆಟ್ ಗೆಲ್ಲುವ ಅವಕಾಶ ವಾಂಗ್ ಅವರದ್ದಾಯಿತು. ಎರಡನೇ ಸೆಟ್ ನಲ್ಲೂ ವಾಂಗ್ ಅವರು 5-4 ಮುನ್ನಡೆಯಲ್ಲಿದ್ದರು ಆದರೆ ವಾಂಗ್ ಸರ್ವಿಸ್ ಬ್ರೇಕ್ ಮಾಡಿದ ಸೆರೆನಾ ಬಳಿಕ ಆಟದಲ್ಲಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು ಹಾಗೂ ಟೈ ಬ್ರೇಕರ್ ಹಂತದವರೆಗೆ ಹೋಗಿದ್ದ ಎರಡನೇ ಸೆಟ್ ಅನ್ನು 7-6 ಅಂತರದಲ್ಲಿ ಗೆದ್ದರು.

ಇನ್ನು ಅಂತಿಮ ಸೆಟ್ ನಲ್ಲಿ 4-5 ಅಂತರದಲ್ಲಿದ್ದಾಗ ಮ್ಯಾಚ್ ಪಾಯಿಂಟ್ ಗೆಲ್ಲುವಲ್ಲಿ ಸೆರೆನಾ ಕೆಲಹೊತ್ತು ಪರದಾಡಿದರು ಆದರೂ ವಾಂಗ್ ಅವರನ್ನು ಕೆಲ ಹೊತ್ತು ಸೆರೆನಾ ಸತಾಯಿಸಿದರು. ಆದರೆ ಉತ್ತಮ ಪ್ರತಿರೋಧದ ಆಟ ಪ್ರದರ್ಶಿಸಿದ ವಾಂಗ್ ಕ್ವಿಯಾಂಗ್ ಅವರು ಮೂರನೇ ಸೆಟ್ ಅನ್ನು ತನ್ನದಾಗಿಸಿಕೊಂಡರು.

ಈ ಸೋಲಿನೊಂದಿಗೆ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿಯನ್ನು ಗೆದ್ದು 24ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಬೆಕೆಂಬ ಸೆರೆನಾ ಕನಸು ನುಚ್ಚುನೂರಾಗಿದೆ. ಮತ್ತು ಮಾರ್ಗರೇಟ್ ಕೋರ್ಟ್ ಅವರ 24 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಸರಿಗಟ್ಟಲು ಸೆರೆನಾ ಇನ್ನಷ್ಟು ಕಾಯುವಂತಾಗಿದೆ.

Advertisement

ಸೆರೆನಾ ಅವರು 2018 ಮತ್ತು 2019ರಲ್ಲಿ ವಿಂಬಲ್ಡನ್ ಹಾಗೂ ಯು.ಎಸ್. ಓಪನ್ ಕೂಟಗಳ ಫೈನಲ್ ಕಾದಾಟದಲ್ಲಿ ಸೋತಿದ್ದರು. ಈ ಹಿಂದೆ ಸೆರೆನಾ ಅವರು 2003, 2005, 2007, 2009, 2010, 2015 ಹಾಗೂ 2017ರಲ್ಲಿ ಆಸ್ಟ್ರೇಲಿಯಾ ಓಪನ್ ಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಸೆರನಾ ಅವರ ಹಿರಿಯ ಸಹೋದರ ವಿನಸ್ ವಿಲಿಯಮ್ಸ್ ಅವರು ಈ ಕೂಟದ ಮಹಿಳೆಯರ ಸಿಂಗಲ್ಸ್ ನಲ್ಲಿ ಕೊಕೊ ಗಫ್ ಅವರಿಗೆ ಶರಣಾಗುವ ಮೂಲಕ ಪ್ರಥಮ ಸುತ್ತಿನಲ್ಲೇ ಹೊರಬಿದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next