ನ್ಯೂಯಾರ್ಕ್ : ಟೆನಿಸ್ ಲೋಕದ ತಾರೆ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ವೃತ್ತಿ ಬದುಕಿನ ವಿದಾಯ ಪಂದ್ಯವನ್ನು ಆಡಿದ್ದಾರೆ. ವನಿತಾ ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯದ ಅಜ್ಲಾ ಟೊಮ್‌ಜಾನೋವಿಕ್ ಎದುರು ಸೋಲು ಅನುಭವಿಸುವ ಮೂಲಕ ಭಾವುಕ ವಿದಾಯದ ಆಟವನ್ನು ಆಡಿದರು.
23 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತೆ ಮತ್ತು ನ್ಯೂಯಾರ್ಕ್‌ನಲ್ಲಿ ಆರು ಬಾರಿ ಚಾಂಪಿಯನ್ ಸೆರೆನಾ ಮೂರು ಸುತ್ತಿನ ಹಣಾಹಣಿಯಲ್ಲಿ 7-5, 6-7 (4/7), 6-1 ಸೆಟ್‌ಗಳಿಂದ ಸೋತರು.
ವೃತ್ತಿಜೀವನವನ್ನು ಇನ್ನೂ ವಿಸ್ತರಿಸುವ ಸಾಧ್ಯತೆಯಿದೆಯೇ ಎಂದು ಕೇಳಿದಾಗ “ನಾನು ಹಾಗೆ ಯೋಚಿಸುವುದಿಲ್ಲ, ಆದರೆ ನಿಮಗೆ ತಿಳಿದಿಲ್ಲ” ಎಂದು 40 ರ ಹರೆಯದ ಸೆರೆನಾ ಪ್ರತಿಕ್ರಿಯಿಸಿದ್ದಾರೆ.
“ಇದು ಮೋಜಿನ ಸವಾರಿಯಾಗಿದೆ. ನನ್ನ ಜೀವನದಲ್ಲಿ ನಾನು ಮಾಡಿದ ಅತ್ಯಂತ ನಂಬಲಾಗದ ಸವಾರಿ ಮತ್ತು ಪ್ರಯಾಣವಾಗಿದೆ.ನನ್ನ ಜೀವನದಲ್ಲಿ ‘ಮುಂದೆ ಸಾಗು, ಸೆರೆನಾ’ ಎಂದು ಹೇಳಿರುವ ಪ್ರತಿಯೊಬ್ಬ ವ್ಯಕ್ತಿಗೆ ನಾನು ತುಂಬಾ ಕೃತಜ್ಞತೆ ಸಲ್ಲಿಸುತ್ತೇನೆ . ನೀವೆಲ್ಲಾ ನನ್ನನ್ನು ಇಲ್ಲಿಯ ವರೆಗೆ ತಂದಿದ್ದೀರಿ” ಎಂದು ಪ್ರತಿಕ್ರಿಯಿಸಿದ್ದಾರೆ.
ಮಹಿಳಾ ಟೆನಿಸ್ ಅಸೋಸಿಯೇಷನ್ (WTA) 319 ವಾರಗಳ ಕಾಲ ಸಿಂಗಲ್ಸ್‌ನಲ್ಲಿ ವಿಶ್ವದ ನಂ. 1 ಶ್ರೇಯಾಂಕವನ್ನು ಸೆರೆನಾ ಹೊಂದಿದ್ದರು.