Advertisement
ಆಸ್ಟ್ರೇಲಿಯಾ ಓಪನ್‌ಗೆ ಸೆರೆನಾ?23 ಗ್ರ್ಯಾನ್‌ಸ್ಲಾಮ್‌ಗಳ ಒಡತಿಯಾದ ಅಮೆರಿಕದ ಸೆರೆನಾ ವಿಲಿಯಮ್ಸ್ ಮದುವೆ, ಮಗು ಅಂತ ಒಂದು ವರ್ಷಗಳ ಕಾಲ ಟೆನಿಸ್ ಕೋರ್ಟ್‌ನಿಂದ ದೂರ ಇದ್ದರು. 2017ರ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಸೆರನಾ ಆಡಿರುವ ಕೊನೆಯ ಅಂತಾರಾಷ್ಟ್ರೀಯ ಟೂರ್ನಿ. ಇದೀಗ ಮತ್ತೆ ಟೆನಿಸ್ ಅಭ್ಯಾಸ ಆರಂಭಿಸಿರುವ ಅವರು, 2018ರ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ಗೆ ಮರಳುವ ಸೂಚನೆ ನೀಡಿದ್ದಾರೆ. ಇದು ಸಹಜವಾಗಿ ಕ್ರೀಡಾಭಿಮಾನಿಗಳಲ್ಲಿ ಉತ್ಸಾಹವನ್ನೂ ಪ್ರತಿಸ್ಪರ್ಧಿಗಳಿಗೆ ನಡುಕವನ್ನೂ ಹುಟ್ಟಿಸಿದೆ.
ರೋಜರ್ ಫೆಡರರ್, ರಾಫೆಲ್ ನಡಾಲ್, ಆ್ಯಂಡಿ ಮರ್ರೆ, ಸ್ಟಾನ್ ವಾವ್ರಿಂಕಾ…. ಇಂತಹ ಬಲಾಡ್ಯ ಆಟಗಾರರಿಗೆ ಬಿಸಿ ಮುಟ್ಟಿಸುವ ಸಾಮರ್ಥ್ಯ ಇರುವ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್. ಭುಜದ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಕಳೆದ ವಿಂಬಲ್ಡನ್ ಆಡಿರುವುದೇ ಕೊನೆ. ಆಮೇಲೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ವೈದ್ಯರ ಸಲಹೆಯಂತೆ ದೀರ್ಘಾವಧಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ಚೇತರಿಸಿಕೊಂಡಿರುವ ಅವರು, ಪುನಃ ಟೆನಿಸ್ ಕೋರ್ಟ್‌ಗೆ ಮರಳುವ ಸಾಧ್ಯತೆ ಇದೆ. ಇದಕ್ಕೆ ಆಸ್ಟ್ರೇಲಿಯಾ ಓಪನ್ ವೇದಿಕೆಯಾದರೂ ಆಗಬಹುದು.
Related Articles
2017ರ ಅವಧಿಯಲ್ಲಿ ಟೆನಿಸ್ ಅಂಗಳದಲ್ಲಿ ಅಬ್ಬರಿಸಿದ್ದು, ಹಳೇ ಹುಲಿಗಳು. ಆಸ್ಟ್ರೇಲಿಯಾ ಓಪನ್‌ನಲ್ಲಿ ನಡೆದ ಫೈನಲ್‌ನಲ್ಲಿ ಭರ್ಜರಿ ಹೋರಾಟ ನಡೆಸಿದ್ದು, ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್. ಇಬ್ಬರೂ ಖ್ಯಾತ ಆಟಗಾರರು. ಆದರೆ ಮರ್ರೆ, ಜೊಕೊ, ವಾವ್ರಿಂಕಾ ಕೈಚಳಕ ಆರಂಭವಾದ ಮೇಲೆ ಇವರ ಪ್ರಭಾವ ಕುಗ್ಗಿತ್ತು. ಆದರೆ 2017 ಹಳೇ ಹುಲಿಗಳಿಗೆ ಮರುಜೀವ ನೀಡಿದೆ. ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿ ನಡಾಲ್‌ಗೆ ಸೋಲುಣಿಸಿದ ಫೆಡರರ್ 5 ವರ್ಷಗಳ ನಂತರ ಪುನಃ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಪಡೆದರು. ಆನಂತರ ಫ್ರೆಂಚ್ ಓಪನ್‌ನಲ್ಲಿ ವಾವ್ರಿಂಕಾಗೆ ಸೋಲುಣಿಸಿದ ನಡಾಲ್ ಟ್ರೋಫಿ ಎತ್ತಿದರು. ಹಾಗೇ ವಿಂಬಲ್ಡನ್, ಯುಎಸ್ ಓಪನ್‌ನಲ್ಲಿಯೂ ಫೆಡರರ್ ಜಯ ಸಾಧಿಸಿದರು. ವರ್ಷದಲ್ಲಿ ನಡೆಯುವ 4 ಗ್ರ್ಯಾನ್‌ಸ್ಲಾಮ್‌ಗಳಲ್ಲಿ ನಾಲ್ಕೂ ಪ್ರಶಸ್ತಿಯನ್ನು ಫೆಡರರ್, ನಡಾಲ್ ಪಡೆದಿರುವುದು ವಿಶೇಷ.
Advertisement
ರೋಚಕತೆ ಯಾಕೆ?ಟೆನಿಸ್‌ನಲ್ಲಿ ತೀವ್ರ ಹಣಾಹಣಿ ಇದ್ದರೆ ಮಾತ್ರ ರೋಚಕತೆ ಹುಟ್ಟಿಕೊಳ್ಳುತ್ತೆ. ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಪಂದ್ಯ ವೀಕ್ಷಿಸುತ್ತಾರೆ. ಫೆಡರರ್, ನಡಾಲ್, ಮರ್ರೆ… ಇಂತಹ ದಿಗ್ಗಜರಿಗೆ ಸವಾಲು ನೀಡಬೇಕು ಅಂದರೆ ಜೊಕೊ ಕೋರ್ಟ್‌ಗೆ ಬರಲೇಬೇಕು. ಹಾಗೆಯೇ ಮಹಿಳೆ ಆಟಗಾರ್ತಿಯರಲ್ಲಿ ಸಿಮೊನಾ ಹಾಲೆಪ್, ಯುಂಗ್ ಜಾನ್‌ಚಾಂಗ್, ಗಾರ್ಬಿಯನ್ ಮುಗುರುಜ, ಕ್ಯಾರೊಲಿನ್ ಒಜ್ನಿಯಾಕಿ… ಇವರ ಗೆಲುವಿನ ಓಟಕ್ಕೆ ತಡೆ ನೀಡಬೇಕಾದರೆ ಅಲ್ಲಿ ಸೆರೆನಾ ವಿಲಿಯಮ್ಸ್ ಇರಲೇಬೇಕು.