Advertisement

ಆಸ್ಟ್ರೇಲಿಯನ್‌ ಓಪನ್‌: ಸೆರೇನಾ ವಿಲಿಯಮ್ಸ್‌ಗೆ ಅಚ್ಚರಿಯ ಸೋಲು

05:57 AM Jan 23, 2019 | Team Udayavani |

ಸಿಡ್ನಿ : ಇಲ್ಲೀಗ ನಡೆಯುತ್ತಿರುವ ಆಸ್ಟ್ರೇಲಿಯನ್‌ ಓಪನ್‌ ನಲ್ಲಿ  ಅಮೆರಿಕನ್‌ ಟೆನಿಸ್‌ ತಾರೆ ಸೆರೇನಾ ವಿಲಿಯಮ್ಸ್‌ ಅವರನ್ನು ಕೆರೋಲಿನಾ ಪ್ಲಿಸ್ಕೋವಾ ಅವರು ಇಂದು ಬುಧವಾರ ಅತ್ಯಂತ ಅಚ್ಚರಿಯ ಮರು ಹೋರಾಟದಲ್ಲಿ 6-4, 4-6, 7-5 ಸೆಟ್ಟುಗಳ ಅಂತರದಲ್ಲಿ ಸೋಲಿಸಿದ್ದಾರೆ. 

Advertisement

24ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯನ್ನು ಗೆದ್ದು ಹೊಸ ಇತಿಹಾಸ ಬರೆಯಬೇಕೆಂಬ ತವಕದಲ್ಲಿ ಸೆರೇನಾ ಎಡವಿರುವುದು ಅಭಿಮಾನಿಗಳಿಗೆ ನಿರಾಶೆ ಉಂಟುಮಾಡಿದೆ. 

ಒಂದು ದೃಷ್ಟಿಯಲ್ಲಿ ಸೆರೇನಾ ವಿಲಿಯಮ್ಸ್‌ ಅವರು ತಮ್ಮ ಈ ಅಚ್ಚರಿಯ ಮತ್ತು ನಿರಾಶೆಯ ಸೋಲಿಗೆ ತಾವೇ ಮುನ್ನುಡಿ ಬರೆದುಕೊಂಡಿದ್ದರು.

ತಮ್ಮ ಪಾಲಿಗೆ ಒದಗಿದ್ದ ನಾಲ್ಕು ಮ್ಯಾಚ್‌ ಪಾಯಿಂಟ್‌ಗಳನ್ನು ವ್ಯರ್ಥ ಮಾಡಿಕೊಂಡದ ಸೆರೇನಾ, ನಿರ್ಣಾಯಕ ಸೆಟ್‌ನಲ್ಲಿ 5-1ರ ಲೀಡ್‌ ಹೊಂದಿದ್ದ ಹೊರತಾಗಿಯೂ ಸೋಲನುಭವಿಸಬೇಕಾಯಿತು. ಇದಕ್ಕೆ ಮುಖ್ಯ ಕಾರಣ ಕೆರೋಲಿನಾ ಅವರು ನಿರ್ಣಾಯಕ ಮರು ಹೋರಾಟವನ್ನು ಸಾದರಪಡಿಸಿ ಪಂದ್ಯವನ್ನು ತಮ್ಮೆಡೆಗೆ ತಿರುಗಿಸಿಕೊಳ್ಳುವಲ್ಲಿ ಯಶಸ್ವಿಯಾದದ್ದು. 

ಕೆರೋಲಿನಾ ಪ್ಲಿಸ್ಕೋವಾ ಅವರು ಈಗಿನ್ನು ನವೋಮಿ ಒಸಾಕಾ ಅವರನ್ನು ಸೆಮಿ ಫೈನಲ್‌ನಲ್ಲಿ ಎದುರಿಸುವರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next