Advertisement

ಇಂಡಿಯನ್‌ ವೆಲ್ಸ್‌ ಟೆನಿಸ್‌: ಸೆರೆನಾ-ವೀನಸ್‌ ಮುಖಾಮುಖೀ

06:20 AM Mar 12, 2018 | Team Udayavani |

ಕ್ಯಾಲಿಫೋರ್ನಿಯಾ: ಇಂಡಿಯನ್‌ ವೆಲ್ಸ್‌ ಟೆನಿಸ್‌ ಟೂರ್ನಿಯ ವನಿತಾ ಸಿಂಗಲ್ಸ್‌ನ 3ನೇ ಸುತ್ತಿನಲ್ಲಿ ವಿಲಿಯಮ್ಸ್‌ ಸಹೋದರಿಯರು ಪರಸ್ಪರ ಎದುರಾಗಲಿದ್ದಾರೆ. ಇದರೊಂದಿಗೆ ಪಂದ್ಯಾವಳಿಯ ಕುತೂಹಲ ತೀವ್ರಗೊಂಡಿದೆ.

Advertisement

ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಸೆರೆನಾ ವಿಲಿಯಮ್ಸ್‌ ಹಾಲೆಂಡಿನ ಕಿಕಿ ಬರ್ಟೆನ್ಸ್‌ ವಿರುದ್ಧ ಭಾರೀ ಹೋರಾಟ ನಡೆಸಿ 7-6 (7-5), 7-5ರಿಂದ ಗೆಲುವು ಸಾಧಿಸಿದರು. ದ್ವಿತೀಯ ಸುತ್ತಿನ ಇನ್ನೊಂದು ಸ್ಪರ್ಧೆಯಲ್ಲಿ ವೀನಸ್‌ ವಿಲಿಯಮ್ಸ್‌ ರೊಮೇನಿಯಾದ ಸೊರಾನಾ ಕಿಸ್ಟಿì ವಿರುದ್ಧ 6-3, 6-4 ಅಂತರದ ಸುಲಭ ಜಯ ಸಾಧಿಸಿದರು.

ಇದು ವೀನಸ್‌-ಸೆರೆನಾ ನಡುವಿನ 29ನೇ ಟೆನಿಸ್‌ ಸಮರವಾಗಲಿದೆ. ಇವರಿಬ್ಬರು ಕೊನೆಯ ಸಲ ಮುಖಾಮುಖೀಯಾದದ್ದು 2017ರ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ. ಇದನ್ನು ಸೆರೆನಾ 6-4, 6-4ರಿಂದ ಗೆದ್ದಿದ್ದರು.

ವೆರ್ದಸ್ಕೊ ಮುನ್ನಡೆ
ಪುರುಷರ “ಬಿಎನ್‌ಪಿ ಪರಿಬಾಸ್‌ ಓಪನ್‌’ ಸಿಂಗಲ್ಸ್‌ ಸ್ಪರ್ಧೆಯ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌ ಅವರನ್ನು 7-6 (4), 4-6, 6-3 ಅಂತರದಿಂದ ಪರಾಭವಗೊಳಿಸಿದರು. ಆದರೆ ರೋಜರ್‌ ಫೆಡರರ್‌-ಆರ್ಜೆಂಟೀನಾದ ಫೆಡ್ರಿಕೊ ಡೆಲ್ಬೊನಿಸ್‌ ನಡುವಿನ ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾಗಿದೆ. ಪಂದ್ಯ ನಿಂತಾಗ ಫೆಡರರ್‌ 6-3, 2-2 ಅಂತರದ ಮುನ್ನಡೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next