Advertisement

ಅಮ್ಮನಾದ ಬಳಿಕ ಸೆರೆನಾಗೆ ಮೊದಲ ಸೋಲು

06:15 AM Dec 31, 2017 | Team Udayavani |

ಅಬುಧಾಬಿ: ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಾಯಿಯಾದ ಖ್ಯಾತ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಟೆನಿಸ್‌ಗೆ ಮರಳಿದ ಮೊದಲ ಪಂದ್ಯದಲ್ಲೇ ಸೋಲುಂಡಿದ್ದಾರೆ.

Advertisement

ಅಬುಧಾಬಿಯಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಅಮೆರಿಕದ ವಿಲಿಯಮ್ಸ್‌ ಫ್ರೆಂಚ್‌ ಓಪನ್‌ ಚಾಂಪಿಯನ್‌ ಜೆಲೆನಾ ಒಸ್ಟಾಪೆಂಕೊ ವಿರುದ್ಧ 6-2, 3-6 ಸೆಟ್‌ಗಳ ಅಂತರದಿಂದ ಸೋಲು ಅನುಭವಿಸಿದರು. ಸೋತರೂ ಸೆರೆನಾ ಅತ್ಯುತ್ತಮ ಆಟ ಪ್ರದರ್ಶಿಸಿ ಗಮನ ಸೆಳೆದರು. 36 ವರ್ಷದ ಸೆರೆನಾ ವಿಲಿಯಮ್ಸ್‌ ಜನವರಿಯಲ್ಲಿ ಆಸ್ಟ್ರೇಲಿಯನ್‌ ಓಪನ್‌ ಸಿಂಗಲ್ಸ್‌ ಪ್ರಶಸ್ತಿ ಗೆದ್ದಿದ್ದರು. ಇದಾದ ಬಳಿಕ ಅವರು ತಾಯಿಯಾಗುತ್ತಿರುವ ಸುದ್ದಿ ಪ್ರಕಟವಾಯಿತು. ಬಳಿಕ ಟೆನಿಸ್‌ನಿಂದ ದೂರ ಉಳಿದಿದ್ದರು. ಇದೀಗ ಮುಂದಿನ ಆಸ್ಟ್ರೇಲಿಯನ್‌ ಓಪನ್‌ಗೂ ಮೊದಲು ಸೌಹಾರ್ದ ಪಂದ್ಯ ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next