Advertisement
ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಲೋಕಾಯುಕ್ತ ನ್ಯಾ| ಎನ್. ಸಂತೋಷ್ ಹೆಗ್ಡೆ ಮುಖ್ಯ ಅತಿಥಿಯಾಗಿರುವರು ಎಂದರು.
ವಿವಿಗೆ ಆಂತರಿಕ ಅನುದಾನದ ಕೊರತೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ ಬಳಿಕ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ವಿವಿಗೆ ಆಂತರಿಕ ಮೂಲಗಳು ಕಡಿಮೆಯಾಗುತ್ತಿವೆ. ಕಾಲೇಜುಗಳ ಸಂಖ್ಯೆ ಕಡಿಮೆ ಯಾಗುತ್ತಿದೆ. ಸಂಯೋಜಿತ ಕಾಲೇಜುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೇವಲ ಪರೀಕ್ಷಾ ಶುಲ್ಕಗಳಿಂದಷ್ಟೇ ಹೊಂದಿಸಿಕೊಳ್ಳು ತ್ತಿದ್ದೇವೆ. ವಿವಿ ಯನ್ನು ಸಂಕಷ್ಟದಿಂದ ಪಾರು ಮಾಡಲು ಕ್ರಮ ಕೈಗೊಳ್ಳು ತ್ತೇವೆ ಎಂದರು. ಪಿಂಚಣಿ ಪಾವತಿಗೆ ಕ್ರಮ
ಮಂಗಳೂರು ವಿವಿ ನಿವೃತ್ತ ಅಧ್ಯಾಪಕರಿಗೆ ಕೋಟಿಗಟ್ಟಲೆ ಪಿಂಚಣಿ ಪಾವತಿ ಬಾಕಿ ಬಗ್ಗೆ ಪ್ರತಿಕ್ರಿಯಿಸಿದ ಅವರು, 45 ನಿವೃತ್ತ ಪ್ರೊಫೆಸರ್‌ಗಳಿಗೆ 21ರಿಂದ 23 ಕೋಟಿ ರೂ.ವರೆಗೆ ಪಾವತಿ ಬಾಕಿ ಯಿದೆ. ಆ ಮೊತ್ತವನ್ನು ಸರಕಾರ ನೀಡಿದರೆ ಉಪಯೋಗವಾಗುತ್ತದೆ. ಆ ಪ್ರಾಧ್ಯಾಪಕರಿಂದ ನಮ್ಮ ವಿವಿಗೆ ದೊಡ್ಡ ಹೆಸರು ಬಂದಿದೆ. ಅವರ ಪಿಂಚಣಿ ಪಾವತಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.
Related Articles
Advertisement
ಭೌತಿಕ ಅಂಕಪಟ್ಟಿ: ಲಿಖಿತ ಆದೇಶ ಬಂದಿಲ್ಲವಿವಿ ವಿದ್ಯಾರ್ಥಿಗಳಿಗೆ ಡಿಜಿ ಲಾಕರ್ ಅಂಕಪಟ್ಟಿಯಿಂದ ಸಮಸ್ಯೆ ಸದ್ಯ ಬಗೆಹರಿದಿದೆ. ಭೌತಿಕ ಅಂಕಪಟ್ಟಿ ನೀಡಬೇಕು ಎಂದು ಸರಕಾರ ತಿಳಿಸಿದ್ದು, ನಾವು ಲಿಖಿತ ಆದೇಶಕ್ಕೆ ಕಾಯುತ್ತಿದ್ದೇವೆ ಎಂದರು. ರಿಜಿಸ್ಟ್ರಾರ್ ಪ್ರೊ| ದೇವೇಂದ್ರಪ್ಪ, ಕಾರ್ಯಕ್ರಮ ಸಂಯೋಜಕ ಪ್ರೊ| ಎ.ಎಂ. ಖಾನ್, ಪ್ರಮುಖರಾದ ಸಂಗಪ್ಪ, ಪ್ರೊ| ಪುಟ್ಟಣ್ಣ ಉಪಸ್ಥಿತರಿದ್ದರು. ವಿವಿಯಲ್ಲಿ ಆರ್ಥಿಕ ಸಂಕಷ್ಟ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರೊ| ಪಿ. ಎಲ್. ಧರ್ಮ ಅವರು, ಈ ಹಿಂದೆ ಮಾಡಲಾಗುತ್ತಿದ್ದ ಅನಾವಶ್ಯಕವಾಗಿ ಖರ್ಚುಗಳಿಗೆ ನಿಯಂತ್ರಣ ವಿಧಿಸಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ವಿವಿಗೆ ಸುಮಾರು 3 ಕೋ. ರೂ. ಉಳಿತಾಯವಾಗುವ ನಿರೀಕ್ಷೆ ಇದೆ. ಅತಿಯಾದ ಮೊಬೈಲ್ ಬಳಕೆಯಿಂದ ಸುಮಾರು 45 ಸಾ. ರೂ. ಹೆಚ್ಚುವರಿ ಖರ್ಚು ಆಗುತ್ತಿತ್ತು. ಅದನ್ನೀಗ ನಿಯಂತ್ರಿಸಲಾಗಿದೆ. ಪೇಪರ್ ಬಳಕೆ ಕಡಿಮೆ ಮಾಡಲಾಗಿದೆ. ನೀರು, ವಿದ್ಯುತ್ ಪೋಲಾಗದಂತೆ ವಿಶೇಷ ನಿಗಾ ವಹಿಸಿದ್ದೇವೆ ಎಂದರು.