Advertisement

Sept 15: ಎಲ್ಲೆಡೆ ಸಂವಿಧಾನ ಪೀಠಿಕೆ ಓದು: ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ

12:35 AM Sep 12, 2023 | Team Udayavani |

ಮಣಿಪಾಲ: ರಾಜ್ಯ ಸರಕಾರದ ಸೂಚನೆಯಂತೆ ಜಿಲ್ಲೆ ಯಲ್ಲಿ ಸೆ. 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾ ಚರಣೆ ಅಂಗವಾಗಿ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಬೆಳಗ್ಗೆ 10 ಗಂಟೆಗೆ ಅಜ್ಜರಕಾಡು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. 1 ಲಕ್ಷ ಮಂದಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿ ದ್ದಾರೆ. ಶಾಲಾ ಕಾಲೇಜು, ಗ್ರಾ.ಪಂ., ಸರಕಾರಿ ಕಚೇರಿ, ಕೈಗಾರಿಕೆಗಳು, ಮಾಹೆ, ನಿಟ್ಟೆ ವಿ.ವಿ., ಧಾರ್ಮಿಕ ಕೇಂದ್ರಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ನಡೆಯಲಿದೆ.

//www.thepreamble-swdkar.inಮೂಲಕ ನೋಂದಣಿ ಮಾಡಬೇಕು. ಅತೀ ಹೆಚ್ಚು ನೋಂದಣಿ ಮಾಡಿದ ಜಿಲ್ಲೆಗೆ ಸರಕಾರದಿಂದ ಬಹುಮಾನವೂ ಬರಲಿದೆ ಎಂದರು.

ವಾರದಲ್ಲಿ 1 ದಿನ ಶಾಲೆಗಳಲ್ಲಿ ಪ್ರಾರ್ಥನೆ ವೇಳೆ ಸಂವಿಧಾನ ಪೀಠಿಕೆ ಓದುವುದು ಮುಂದುವರಿಯುತ್ತದೆ. ಕಟ್ಟುನಿಟ್ಟಾಗಿ ಜಾರಿ ಮಾಡಲು ಡಿಡಿಪಿಐ, ಡಿಡಿಪಿಯುಗೆ ನಿರ್ದೇಶನ ನೀಡಲಾಗುವುದು ಎಂದರು.

ಆಯುಷ್ಮಾನ್‌ಭವ
ಕೇಂದ್ರ ಸರಕಾರದ ಮನೆ ಮನೆಗೆ ಆರೋಗ್ಯ, ಎಲ್ಲರ ಆರೋಗ್ಯ ತಪಾಸಣೆಯ ಆಯುಷ್ಮಾನ್‌ಭವ ಕಾರ್ಯಕ್ರಮಕ್ಕೆ ರಾಷ್ಟ್ರಪತಿಯವರು ಆನ್‌ಲೈನ್‌ ಮೂಲಕ ಚಾಲನೆ ನೀಡ ಲಿದ್ದಾರೆ. ಸೆ. 17ಕ್ಕೆ ಆಯುಷ್ಮಾನ್‌ ಆಪ್‌ ಕೆ ದ್ವಾರ್‌ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ತಪಾಸಣೆ ನಡೆಯಲಿದೆ.

Advertisement

ಡೆಂಗ್ಯೂ ಹೆಚ್ಚಳ
ಕಳೆದೊಂದು ವಾರದಲ್ಲಿ ಜಿಲ್ಲಾದ್ಯಂತ ಡೆಂಗ್ಯೂ ಹೆಚ್ಚಳವಾಗಿದೆ. ಸದ್ಯ 350 ಪ್ರಕರಣ ಇದೆ. ಯಾವುದೇ ಜೀವಹಾನಿಯಾಗಿಲ್ಲ. ಅಲ್ಲಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ನಿರಂತರ ತಪಾಸಣೆಗೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಕಾಮಗಾರಿಗೆ ತಡೆ ಬಂದಿಲ್ಲ
ಪರಶುರಾಮ ಥೀಮ್‌ ಪಾರ್ಕ್‌ ನಲ್ಲಿ ಕಾಮಗಾರಿ ನಡೆಯುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ ಈವರೆಗೆ 2 ಕೋ.ರೂ. ಬಿಡುಗಡೆ ಯಾಗಿದೆ. ಉಸ್ತುವಾರಿ ಸಚಿವರು ಅಥವಾ ರಾಜ್ಯ ಸರಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಪ್ರವಾ ಸೋದ್ಯಮ ಇಲಾಖೆಯಿಂದ ಇನ್ನಷ್ಟು ಮಾಹಿತಿ ಪಡೆದು, ರಾಜ್ಯ ಕಚೇರಿಗೆ ವರದಿ ಸಲ್ಲಿಸಲಿದ್ದೇವೆ ಎಂದರು.

2 ತಾಲೂಕುಗಳಲ್ಲಿ ಪರಿಶೀಲನೆ
ಮಳೆ ಕೊರತೆ ಹಿನ್ನೆಲೆಯಲ್ಲಿ ಬರ ಘೋಷಣೆಗೆ ಪೂರಕವಾಗಿ ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ ತಜ್ಞರ ತಂಡದಿಂದ ಪರಿಶೀಲನೆ ಆರಂಭವಾಗಿದೆ. ಪ್ರತೀ ತಾಲೂಕಿನ 5 ಸ್ಥಳಗಳಲ್ಲಿ ನೀರಿನ ಲಭ್ಯತೆ ಸಹಿತವಾಗಿ ಹಲವು ಅಂಶಗಳನ್ನು ಪರಿಶೀಲಿಸಿ ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ರವಾನಿಸಲಿದ್ದಾರೆ ಎಂದರು.

ಹೆಚ್ಚುವರಿ ಜಾಗ ಮಂಜೂರು
ಐಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ 5 ಎಕ್ರೆ ಜಾಗ ವಾರಂಬಳ್ಳಿಯಲ್ಲಿ ನೀಡಿದ್ದೇವೆ. ಇನ್ನು 50 ಸೆಂಟ್ಸ್‌ ಹೆಚ್ಚುವರಿಯಾಗಿ ಕೇಳಿದ್ದರು. ಅದನ್ನು ಮಂಜೂರು ಮಾಡಿದ್ದೇವೆ. ಸೆ. 20ಕ್ಕೆ ಅಲೆವೂರಿನಲ್ಲಿ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡದ ಶಂಕುಸ್ಥಾಪನೆ ನಡೆಯಲಿದೆ ಎಂದು ಹೇಳಿದರು.

ರಾಜ್ಯದಿಂದಲೇ ಟೆಂಡರ್‌ ಆಗಬೇಕು
ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಇರುವ ಡಯಾಲಿಸಿಸ್‌ ಕೇಂದ್ರಗಳು ಚೆನ್ನಾಗಿ ಕೆಲಸ ಮಾಡುತ್ತಿದೆ. ನಿರ್ವಹಣೆ ಮಾಡುತ್ತಿರುವ ಸಂಸ್ಥೆ ಬದಲಾವಣೆ ಸಂಬಂಧ ರಾಜ್ಯ ಸರಕಾರವೇ ಹೊಸ ಟೆಂಡರ್‌ ಕರೆದು ಮುಂದಿನ ಪ್ರಕ್ರಿಯೆ ನಡೆಸಬೇಕು ಎಂದರು. ಜಿಪಂ ಸಿಇಒ ಪ್ರಸನ್ನ ಎಚ್‌., ಉಡುಪಿ ಡಿವೈಎಸ್‌ಪಿ ದಿನಕರ್‌ ಸಹಿತ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸರಕಾರಿ ಶಾಲೆಗಳಲ್ಲಿ ನಿರ್ಮಾಣವಾಗುತ್ತಿರುವ ವಿವೇಕ ಕೊಠಡಿಗಳ ಕಾಮಗಾರಿ ಬಹುಪಾಲು ಪೂರ್ಣಗೊಂಡಿದೆ. ಒಂದೊಂದೇ ಕೊಠಡಿಯನ್ನು ಶಾಲೆಗಳಿಗೆ ಹಸ್ತಾಂತರಿಸುವ ಕಾರ್ಯವೂ ಆರಂಭವಾಗಿದೆ. ಆದಷ್ಟು ಬೇಗ ಎಲ್ಲ ಕೊಠಡಿಗಳು ಆಯಾ ಶಾಲೆಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಲಭ್ಯವಾಗಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next