ಹೊಸದಿಲ್ಲಿ: ”ಕಾಶ್ಮೀರದಲ್ಲಿ ಪ್ರತ್ಯೇಕತಾವಾದವು ಸತ್ತಿದೆ ”ಎಂದು ಮಾಜಿ ಸ್ಪೈಮಾಸ್ಟರ್ ಎ.ಎಸ್. ದುಲಾತ್ ಅವರು ಹೇಳಿದ್ದಾರೆ. ಇದೆ ವೇಳೆ ‘ಕಣಿವೆಯಲ್ಲಿ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳೊಂದಿಗೆ ಸಂವಾದವನ್ನು ಪ್ರಾರಂಭಿಸುವ ಅವಶ್ಯಕತೆಯಿದೆ’ ಎಂದು ಸಲಹೆ ನೀಡಿದ್ದಾರೆ.
ಶನಿವಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ”ಪ್ರತ್ಯೇಕವಾದವು ಈಗ ಸತ್ತಿದೆ ಎಂದು ನಾನು ನಂಬುತ್ತೇನೆ. ಇದು ಅನಗತ್ಯವಾಗಿ ಮಾರ್ಪಟ್ಟಿದೆ. 370ನೇ ವಿಧಿಯಂತೆ ಪ್ರತ್ಯೇಕತಾವಾದವೂ ಇಲ್ಲವಾಗಿದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಕೇಂದ್ರ ಸರಕಾರಕ್ಕೆ ಜಮ್ಮು ಮತ್ತು ಕಾಶ್ಮೀರದ ಕುರಿತು ಸಲಹೆಗಾರರಾಗಿದ್ದ ದುಲಾತ್ ಅವರು ಪಾಕಿಸ್ತಾನದೊಂದಿಗೆ ಮಾತುಕತೆಯನ್ನು ಪ್ರಾರಂಭಿಸುವ ಅಗತ್ಯವನ್ನು ಪ್ರತಿಪಾದಿಸಿದರು.
2019 ರ ಆಗಸ್ಟ್ 4ರಿಂದ ಗೃಹಬಂಧನದಲ್ಲಿರುವ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಕಾಶ್ಮೀರ ರಾಜಕೀಯದಲ್ಲಿ ಪಾತ್ರವನ್ನು ಹೊಂದಿದ್ದ ಎಂದು ದುಲಾತ್ ಹೇಳಿದರು.
ಆರ್ಟಿಕಲ್ 370 ರದ್ದತಿಯೊಂದಿಗೆ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲಾಗಿದೆಯೇ ಎಂದು ಕೇಳಿದಾಗ, “ಎಂದಿಗೂ ದೊಡ್ಡ ಸಮಸ್ಯೆ ಇರಲಿಲ್ಲ ಮತ್ತು ಯಾವಾಗಲೂ ಸಮಸ್ಯೆ ಇರುತ್ತದೆ. ನಾವು ಎಷ್ಟು ಬೇಗ ಚುನಾಯಿತ ಸರ್ಕಾರವನ್ನು ಹೊಂದಿದ್ದೇವೆಯೋ ಅಷ್ಟು ಒಳ್ಳೆಯದು, ಏಕೆಂದರೆ ಅದು ದೆಹಲಿಗೆ ಬಲ ನೀಡುತ್ತದೆ. ಸಂವಾದ, ಮಾತನಾಡುವುದೇ ದಾರಿ. ಪ್ರತ್ಯೇಕತಾವಾದಿಗಳೊಂದಿಗೆ ಇಲ್ಲದಿದ್ದರೆ, ಮುಖ್ಯವಾಹಿನಿಯೊಂದಿಗೆ ಮಾತನಾಡಿ, ಚುನಾವಣೆಗಳನ್ನು ನಡೆಸಿ ಮತ್ತು ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಿ” ಎಂದು ಹೇಳಿದರು.