Advertisement

ಪ್ರತ್ಯೇಕ ರಾಜ್ಯ: 23ರಂದು ಬಾಗಲಕೋಟೆಯಲ್ಲಿ ಸಭೆ

06:15 AM Sep 08, 2018 | |

ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಸೆ.23ರಂದು ಬೆಳಗ್ಗೆ 11 ಗಂಟೆಗೆ ಬಾಗಲಕೋಟೆಯ ಚರಂತಿಮಠ ಸಭಾಭವನದಲ್ಲಿ ಸಭೆ ಕರೆಯಲಾಗಿದೆ ಎಂದು ಉಕ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ತಿಳಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯದಲ್ಲಿ ಬರುವ ಜಿಲ್ಲೆಗಳೆಷ್ಟು ಮತ್ತು ಯಾವುವು? ರಾಜಧಾನಿ ಯಾವುದಾಗಬೇಕು? ಧ್ವಜದ ವಿನ್ಯಾಸ ಹೇಗಿರಬೇಕು, ಧ್ವಜಾರೋಹಣ ಮಾಡುವ ದಿನಾಂಕ ನಿಗದಿ ಹಾಗೂ ಯಾವ ಹೆಸರನ್ನು ನಾಮಕರಣ ಮಾಡಬೇಕೆಂಬುದರ ಕುರಿತು ಐದು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಗುವುದು. ನಿಡಸೋಸಿಯ ಪಂಚಮ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಭೀಮಪ್ಪ ಗಡಾದ ಅಧ್ಯಕ್ಷತೆ ವಹಿಸುವರು.

ಮಠಾಧೀಶರು, ಸಮಾನ ಮನಸ್ಕ  25-30 ಸಂಘಟನೆಗಳ ಪ್ರಮುಖರು, ಸಾಮಾಜಿಕ ಚಿಂತಕರು, ಸಾಹಿತಿಗಳು, ಬುದ್ಧಿಜೀವಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರತ್ಯೇಕ ರಾಜ್ಯಕ್ಕೆ ಆದ್ಯತೆ ನೀಡುವವರಿಗೆ ಮಾತ್ರ ಸಭೆಯಲ್ಲಿ ಅವಕಾಶ ನೀಡಲಾಗುವುದು. ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ 150 ಸ್ವಾಮಿಗಳು, ನಾಡೋಜ ಡಾ| ಪಾಟೀಲ ಪುಟ್ಟಪ್ಪ, ಡಾ| ಶಿವಾನಂದ ಜಾಮದಾರ ಒಳಗೊಂಡಂತೆ ಇನ್ನಿತರ ಪ್ರಮುಖರಿಗೆ ಹಾಗೂ ಉ.ಕ. ಭಾಗದ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರಿಗೆ ಪ್ರತ್ಯೇಕ ರಾಜ್ಯ ಕುರಿತು ಮಾತ್ರ ತಮ್ಮ ಅಭಿಪ್ರಾಯ ಮಂಡಿಸಬೇಕೆಂದು ಸೂಚಿಸಿ ಪತ್ರ ಬರೆಯಲಾಗುವುದು. ಸಭೆಯಲ್ಲಿನ ಎಲ್ಲರ ಅಭಿಪ್ರಾಯಗಳೊಂದಿಗೆ ಪ್ರಧಾನಿ, ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next