Advertisement
ಪ್ರಸ್ತುತ ಇರುವ ಕ್ರೀಡಾ ಹಾಸ್ಟೆಲ್‌ನಲ್ಲಿ ಬಾಲಕರು-ಬಾಲಕಿಯರು ಸೇರಿ ಒಟ್ಟು 50 ಮಂದಿ ವಾಸ್ತವ್ಯ ಇರಲು ಅವಕಾಶವಿದೆ. ಆದರೆ ಲಾಕ್‌ಡೌನ್‌ಗೂ ಮುನ್ನ ಇಲ್ಲಿ ಕೇವಲ 22 ಮಕ್ಕಳು ಮಾತ್ರ ಇದ್ದರು. ಪ್ರತ್ಯೇಕ ವಸತಿ ವ್ಯವಸ್ಥೆ, ಊಟೋಪಚಾರ ಹಾಗೂ ಆಗಮನ-ನಿರ್ಗಮನದ ವ್ಯವಸ್ಥೆ ಇದೆ. ಜನವರಿ, ಫೆಬ್ರವರಿಯಲ್ಲಿ ತಾಲೂಕು – ಜಿಲ್ಲಾಮಟ್ಟದ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಅತ್ಯುತ್ತಮ ಕ್ರೀಡಾ ಪ್ರದರ್ಶನ ನೀಡುವ ಬಾಲಕಿಯರಿಗೆ ಹೆಚ್ಚಿನ ತರಬೇತಿ ಹಾಗೂ ಸರಕಾರದ ಸ್ಪಂದನೆ ಹಿನ್ನೆಲೆಯಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುತ್ತದೆ. ದ.ಕ. ಜಿಲ್ಲೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಹೊರ ಜಿಲ್ಲೆಯ ವಿದ್ಯಾರ್ಥಿನಿಯರು ಈ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ವಿಶೇಷವಾಗಿ ಮಂಗಳೂರು ಹಾಸ್ಟೆಲ್‌ನಲ್ಲಿ ಆ್ಯತ್ಲೆಟಿಕ್, ವಾಲಿಬಾಲ್‌ನಲ್ಲಿ ಸಾಧನೆ ತೋರಿದ ಬಾಲಕಿಯರಿಗೆ ಅವಕಾಶವಿದೆ.
“ಇತ್ತೀಚಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಪಡೆಯಲು ನಿರಾಸಕ್ತಿ ತೋರುತ್ತಿದ್ದಾರೆ. ಮನೆಯಿಂದಲೇ ಆಗಮಿಸಿ ತರಬೇತಿ ಪಡೆದು ಮತ್ತೆ ಮನೆಗೆ ವಾಪಸಾಗುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿದೆ. ಜತೆಗೆ, ದ.ಕ. ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯಕ್ಕೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಆದರೆ ಉಳಿದ ಜಿಲ್ಲೆಯ ವಿದ್ಯಾರ್ಥಿಗಳು ಹಾಸ್ಟೆಲ್ ಅವ ಕಾಶ ಬಳಕೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು. 1.5 ಕೋ.ರೂ. ವೆಚ್ಚದಲ್ಲಿ ಹಾಸ್ಟೆಲ್
ಮಂಗಳೂರು ಸಹಿತ ರಾಜ್ಯದ 10 ಕಡೆಗಳಲ್ಲಿ ತಲಾ 1.5 ಕೋ.ರೂ. ವೆಚ್ಚದಲ್ಲಿ ಬಾಲಕಿ ಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಸರಕಾರ ಮಂಜೂರಾತಿ ನೀಡಿದೆ. ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಈ ಕ್ರೀಡಾ ವಸತಿ ನಿರ್ಮಾಣ ವಾಗಲಿದೆ.
- ಪ್ರದೀಪ್ ಡಿ’ಸೋಜಾ, ಉಪನಿರ್ದೇಶಕರು, ಕ್ರೀಡಾ ಇಲಾಖೆ-ದ.ಕ.