Advertisement
ನಗರದ ಅರಮನೆ ಮೈದಾನದಲ್ಲಿ ರವಿವಾರ ಕರ್ನಾಟಕ ಕ್ಷತ್ರಿಯ ಒಕ್ಕೂಟ ಹಮ್ಮಿಕೊಂಡಿದ್ದ ಕ್ಷತ್ರಿಯ ಸಮಾಜದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉದ್ದೇಶಿತ ಸಮುದಾಯದಲ್ಲಿ ಸಣ್ಣ ಸಣ್ಣ ವರ್ಗಗಳು ಈಗಲೂ ಪ್ರಾಮಾಣಿಕವಾಗಿ ತಮ್ಮ ಕುಲಕಸುಬುಗಳನ್ನು ಮುನ್ನಡೆಸಿಕೊಂಡು ಬರುತ್ತಿವೆ. ಅವುಗಳನ್ನು ಪ್ರೋತ್ಸಾಹಿಸುವುದರ ಜತೆಗೆ ಅವಲಂಬಿತ ಕುಟುಂಬಗಳ ಶ್ರೇಯೋಭಿವೃದ್ಧಿ ಸರಕಾರದ ಕರ್ತವ್ಯ. ಈ ಹಿನ್ನೆಲೆಯಲ್ಲಿ ಬರುವ ಬಜೆಟ್‌ನಲ್ಲಿ ಪ್ರತ್ಯೇಕ ನಿಗಮ ಸ್ಥಾಪನೆ ಜತೆಗೆ ಸೂಕ್ತ ಅನುದಾನ ನೀಡಲಾಗುವುದು ಎಂದು ಪ್ರಕಟಿಸಿದರು.
Related Articles
ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ, ನಾಡಿನ ರಕ್ಷಣೆ ಹಾಗೂ ಸಂಸ್ಕೃತಿ ಪರಂಪರೆಗಳ ಹಿರಿಮೆಗೆ ಕ್ಷತ್ರಿಯರ ಕೊಡುಗೆ ಅಪಾರವಾದದು. ಕ್ಷತ್ರಿಯರ ನಡೆ, ರಾಜಧಾನಿಯ ಕಡೆ ಎಂಬ ಘೋಷವಾಕ್ಯದೊಂದಿಗೆ ಈ ಸಮಾವೇಶ ನಡೆಯುತ್ತಿದೆ. ಅದಕ್ಕೂ ಮೀರಿ ಕ್ಷತ್ರಿಯರ ನಡೆ ವಿಧಾನಸೌಧದ ಒಳಕ್ಕೂ ಮುಂದುವರಿಯಬೇಕು ಎಂದು ಆಶಿಸಿದರು.
Advertisement
ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರವು ಕ್ಷತ್ರಿಯರ ಹಿತರಕ್ಷಣೆಗೆ ಬದ್ಧವಾಗಿದ್ದು, ಅದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಖಂಡ ಭಾರತ ನಿರ್ಮಾಣಕ್ಕೆ ಕ್ಷತ್ರಿಯರ ಕೊಡುಗೆ ಏನೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ನಮ್ಮ ಧರ್ಮ, ಭಾಷೆ ಹಾಗೂ ಭೂಪ್ರದೇಶದ ರಕ್ಷಣೆಗೆ ಹೆಚ್ಚಿನ ಕೊಡುಗೆ ನೀಡಿರುವ ಕ್ಷತ್ರಿಯರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ಧವಾಗಿದೆ ಎಂದರು.
ಶಾಸಕರಾದ ಬಂಡೆಪ್ಪ ಕಾಶೆಂಪುರ, ಅರವಿಂದ ಲಿಂಬಾವಳಿ, ಸಂಸದ ಪಿ.ಸಿ. ಮೋಹನ್ ಮತ್ತಿತರರ ಮಾತನಾಡಿದರು. ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಉದಯ್ ಸಿಂಗ್, ತಿಗಳರ ಜನಾಂಗದ ಮುಖಂಡ ಸುಬ್ಬಣ್ಣ ಮತ್ತಿತರರು ಉಪಸ್ಥಿತರಿದ್ದರು.
ಘೋರಿಯನ್ನು ಸೋಲಿಸಿದವರು: ಅರುಣ್ ಸಿಂಗ್ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಹಿಂದುತ್ವದ ರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿದ್ದವರು ಕ್ಷತ್ರಿಯರು. ಮೊಹಮ್ಮದ್ ಘೋರಿಯನ್ನು ಸತತ 17 ಬಾರಿ ಸೋಲಿಸಿ ಹಿಮ್ಮೆಟ್ಟಿಸಿದವರು ರಾಣಾ ಪ್ರತಾಪ್ ಸಿಂಗ್. ಮುಂಬರುವ ಪೀಳಿಗೆಗಳಿಗೆ ಈ ಮಹಾಪುರುಷರು ಮತ್ತು ದೇಶದ ಇತಿಹಾಸವನ್ನು ಪರಿಚಯಿಸುವುದು ನಮ್ಮ ಕರ್ತವ್ಯ ಎಂದರು. ದೇಶದ ನೂರಾರು ವರ್ಷಗಳ ಐತಿಹಾಸಿಕ ಮತ್ತು ಪಾರಂಪರಿಕ ಮೂರ್ತಿಗಳು ಕಳವಾಗಿದ್ದವು. ಅವುಗಳ ಪೈಕಿ 2014ರ ವರೆಗೆ ಕೇವಲ 13 ಮೂರ್ತಿಗಳು ವಾಪಸ್ ತರಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಈಚೆಗೆ ಒಟ್ಟಾರೆ 354 ಮೂರ್ತಿಗಳನ್ನು ವಿದೇಶದಿಂದ ಭಾರತಕ್ಕೆ ವಾಪಸ್ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ರಾಮ ಮಂದಿರಕ್ಕೆ ಭೂಮಿ ಪೂಜೆಯೂ ಮುಗಿದಿದ್ದು, 2024ರಲ್ಲಿ ಭವ್ಯ ಮಂದಿರ ತಲೆಯೆತ್ತಲಿದೆ ಎಂದು ಹೇಳಿದರು. ಇಡೀ ಸಮಾಜದ ಬೆಳವಣಿಗೆಗೆ ಜ್ಞಾನದ ಕತ್ತಿ ಹಿಡಿಯುವುದೂ ಗೊತ್ತಿದೆ. ರಾಮ, ಕೃಷ್ಣ, ಸಾಮ್ರಾಟ್ ಅಶೋಕ, ರಾಣಾ ಪ್ರತಾಪ್ ಸಿಂಗ್, ಶಿವಾಜಿ ಮಹಾರಾಜ್ ಹೀಗೆ ಮೊದಲಾದ ನೂರಾರು ಧೀರರು ಶೂರರು ಆಳಿದ್ದಾರೆ. ಅಂತೆಯೇ ಸ್ವಾಮಿ ವಿವೇಕಾನಂದರೂ ಕ್ಷತ್ರಿಯರು. ಇವರು ಜ್ಞಾನದ ಕತ್ತಿ ಹಿಡಿದು ಜಗತ್ತಿಗೇ ದಾರಿದೀಪವಾದರು.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ