Advertisement

ಪ್ರತ್ಯೇಕ ಬ್ಯಾಂಕ್‌ ಖಾತೆ ಕಡ್ಡಾಯ

01:16 AM Mar 21, 2019 | |

ಚುನಾವಣಾ ಅಂದಾಕ್ಷಣ ಮುನ್ನೆಲೆಗೆ ಬರುವುದು ಹಣದ ವಿಚಾರ. ದುಡ್ಡು ಇಲ್ಲದಿದ್ದರೆ ಗೆಲ್ಲೋದು ದೂರದ ಮಾತು ಚುನಾವಣೆಗೆ ನಿಲ್ಲೋದು ಕಷ್ಟಸಾಧ್ಯ ಅನ್ನುವಂತಹ ಪರಿಸ್ಥಿತಿ ಇದೆ. ಪಕ್ಷಗಳ ಮತ್ತು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಹದ್ದಿನ ಕಣ್ಣು ಇಡುವ ಆಯೋಗ, ಪೈಸ ಪೈಸದ ಲೆಕ್ಕ ಕೇಳುತ್ತದೆ. ಅದರಂತೆ ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿ ಚುನಾವಣಾ ವೆಚ್ಚದ ನಿರ್ವಹಣೆಗೆ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಬೇಕಾಗುತ್ತದೆ. ನಾಮಪತ್ರ ಸಲ್ಲಿಸುವ ಕನಿಷ್ಠ ಒಂದು ದಿನ ಮೊದಲು ಈ ಖಾತೆ ತೆರೆದಿರಬೇಕು. ಆ ಬ್ಯಾಂಕ್‌ ಖಾತೆಯ ವಿವರ ಹಾಗೂ ಖಾತೆ ಸಂಖ್ಯೆಯನ್ನು ನಾಮಪತ್ರ ಸಲ್ಲಿಸುವವೇಳೆ ಅಭ್ಯರ್ಥಿಯು ಸಂಬಂಧಪಟ್ಟ ಚುನಾವಣಾಧಿಕಾರಿಗೆ ಲಿಖೀತ ರೂಪದಲ್ಲಿ ಸಲ್ಲಿಸಬೇಕು.

Advertisement

ಚುನಾವಣೆಗೆ ಖರ್ಚು ಮಾಡುವ ಹಣವನ್ನು ಇದೇ ಬ್ಯಾಂಕ್‌ನಲ್ಲಿ ಜಮೆ ಇಟ್ಟು, ಅದರ ಮೂಲಕವೇ ಖರ್ಚು ಮಾಡಬೇಕು. ಅಭ್ಯರ್ಥಿಯ ಹೆಸರಲ್ಲಿ ಈಗಾಗಲೇ ಇರುವ ಬ್ಯಾಂಕ್‌ ಖಾತೆಯನ್ನು ಚುನಾವಣಾ ವೆಚ್ಚಕ್ಕಾಗಿ ಬಳಸುವಂತಿಲ್ಲ. ಅಭ್ಯರ್ಥಿ ಹೆಸರಲ್ಲಿ ಅಥವಾ ಅವರ ಚುನಾವಣಾ ಏಜೆಂಟ್‌ ಹೆಸರಲ್ಲಿ ಜಂಟಿ ಖಾತೆ ತೆರೆಯಬೇಕು. ಕುಟುಂಬದ ಬೇರೆ ಸದಸ್ಯರು ಅಥವಾ ಚುನಾವಣಾ ಏಜೆಂಟ್‌ ಅಲ್ಲದವರ ಹೆಸರಲ್ಲಿ ಖಾತೆ ತೆರೆಯುವಂತಿಲ್ಲ. ರಾಜ್ಯದ ಯಾವುದೇ ಭಾಗದಲ್ಲಾದರೂ ಸಹಕಾರಿ ಬ್ಯಾಂಕು ಅಥವಾ ಪೋಸ್ಟ್‌ ಆಫೀಸ್‌ ಸೇರಿದಂತೆ ಯಾವುದೇ ಬ್ಯಾಂಕ್‌ನಲ್ಲಿ ಖಾತೆ ತೆರೆಯಬಹುದು. ಈ ಬ್ಯಾಂಕ್‌ ಖಾತೆಯ ವಹಿವಾಟಿನ ಮೇಲೆ ಸಂಬಂಧಪಟ್ಟ ಬ್ಯಾಂಕ್‌ ಅಧಿಕಾರಿಗಳು, ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾ ವೆಚ್ಚಮೇಲ್ವಿಚಾರಣೆ ತಂಡಗಳು ವಿಶೇಷ ನಿಗಾ ಇಟ್ಟಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next