Advertisement
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ನೀರಿನ ಬಿಲ್, ಉದ್ದಿಮೆ ಪರವಾನಿಗೆ ಆನ್‌ಲೈನ್ ಮುಖೇನ ಕಾರ್ಯನಿರ್ವ ಹಿಸುತ್ತಿದ್ದು, ಇದೀಗ ಆ ಸಾಲಿಗೆ ಆಸ್ತಿ ತೆರಿಗೆ ಕೂಡ ಸೇರಲಿದೆ. ಇದರೊಂದಿಗೆ ಇಂದಿನ ಅಗತ್ಯಗಳಿಗೆ ತಕ್ಕಂತೆ ಆನ್‌ಲೈನ್ ವ್ಯವಸ್ಥೆಗೆ ಒಗ್ಗಿಕೊಳ್ಳಲು ಮನಪಾ ನಿರ್ಧರಿಸಿದೆ. ಆಸ್ತಿ ತೆರಿಗೆ ಪಾವತಿಗೆ ಪ್ರತ್ಯೇಕ ಆ್ಯಪ್ ಕುರಿತಂತೆ ಕಿಯೋನಿಕ್ಸ್ ಸಂಸ್ಥೆಯ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದ್ದು, ಪ್ರತ್ಯೇಕ ಆ್ಯಪ್ ರೂಪುಗೊಳ್ಳುತ್ತಿದೆ.
Related Articles
Advertisement
ಅದೇ ರೀತಿ, ಪಾನ್‌ಸಿಟಿ ಸೌಲಭ್ಯಗಳು ದೊರೆಯಲಿದೆ. ಸಿಟಿ ಗೈಡ್, ಎಮರ್ಜೆನ್ಸಿ ಸರ್ವಿಸ್, ಕಟ್ಟಡ ಪರವಾನಿಗೆ, ಸೌಲಭ್ಯಗಳ ಮಾಹಿತಿ, ಪಾರ್ಕಿಂಗ್ ಸ್ಥಳಗಳು, ಪಾಸ್‌ಪೋರ್ಟ್ ಪರಿಶೀಲನೆ, ಡ್ರೈವಿಂಗ್ ಲೈಸೆನ್ಸ್ ವಿವರ, ರಸ್ತೆಗಳ ಮಾಹಿತಿ, ನೀರಿನ ಸೌಲಭ್ಯದ ಮಾಹಿತಿ, ಉದ್ದಿಮೆ ಮಾಹಿತಿ, ಪಡಿತರ ವಿವರ, ಮಹಿಳಾ ವಾಣಿ, ಆದಾಯ ವಿವರಗಳು, ಮತದಾರರ ಗುರುತಿನ ಚೀಟಿ, ನಗರ ಪ್ರದಕ್ಷಿಣೆ, ಆರ್‌ಟಿಒ ದಂಡಗಳು, ಕಾಣೆಯಾದವರ ಮಾಹಿತಿ, ಸಾರ್ವಜನಿಕ ಅಹವಾಲು, ವಿಚಾರಣೆ, ದಂಡ ಕಟ್ಟುವ ವಿಧಾನಗಳು, ಉದ್ಯೋಗ ವಿವರಗಳು, ಜನ್ಮದಿನಾಂಕ ಸರ್ಟಿಫಿಕೆಟ್, ಆಸ್ಪತ್ರೆ, ಆರೋಗ್ಯ ವಿವರಗಳು ಮೊಬೈಲ್ ಆ್ಯಪ್‌ನಲ್ಲಿ ಬರುವ ಸಾಧ್ಯತೆ ಇದೆ.
ಮಹಾನಗರ ಪಾಲಿಕೆಯಲ್ಲಿ ಆನ್‌ಲೈನ್ ವ್ಯವಸ್ಥೆಗೆ ಒತ್ತು ನೀಡಲಾಗುವುದು. ನೀರಿನ ಬಿಲ್ ಪಾವತಿ, ಉದ್ದಿಮೆ ಪರವಾನಿಗೆ ಈಗಾಗಲೇ ಡಿಜಿಟಲ್ ವ್ಯವಸ್ಥೆ ಇದೆ. ಸದ್ಯದಲ್ಲಿಯೇ ಆಸ್ತಿತೆರಿಗೆ ಕೂಡ ಆನ್‌ಲೈನ್ ಆಗಲಿದ್ದು, ಈಗಾಗಲೇ ಪ್ರತ್ಯೇಕ ಆ್ಯಪ್ ರೂಪುಗೊಳ್ಳುತ್ತಿದೆ. ಇನ್ನು, ಪಾಲಿಕೆಯಲ್ಲಿ ಪೇಪರ್‌ಲೆಸ್ ವ್ಯವಸ್ಥೆಗೂ ಒತ್ತು ನೀಡಲಾಗುತ್ತಿದೆ. –ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್