ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ನೂರಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.
ತಿಂಗಳ ಕೊನೆಯ ಗುರುವಾರವಾಗಿರುವ ಇಂದು ವಾಯಿದೆ ವಹಿವಟು ಚುಕ್ತಾ ನಡೆಯಲಿದ್ದು ಅದಕ್ಕೆ ಮುನ್ನವೇ ಟಿಸಿಎಸ್, ಆರ್‌ಐಎಲ್, ಐಟಿಸಿ ಮುಂತಾದ ಮುಂಚೂಣಿ ಶೇರುಗಳು ಮುನ್ನಡೆ ಸಾಧಿಸಿದವು.
ನಿನ್ನೆ ಬುಧವಾರ ಸೆನ್ಸೆಕ್ಸ್ 248 ಅಂಕಗಳ ಹಿನ್ನಡೆಯನ್ನು ದಾಖಲಿಸಿದ್ದರೆ, ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 67.65 ಅಂಕಗಳ ಇಳಿಕೆಯನ್ನು ದಾಖಲಿಸಿತ್ತು.
ಇಂದು ಬೆಳಗ್ಗೆ 10.30ರ ಸುಮಾರಿಗೆ ಸೆನ್ಸೆಕ್ಸ್ 208.09 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 39,710.14 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 53.40 ಅಂಕಗಳ ಏರಿಕೆಯೊಂದಿಗೆ 11,914.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನ ಟಾಪ್ ಗೇನರ್‌ಗಳಾಗಿ ಮೂಡಿ ಬಂದ ಎನ್‌ಟಿಪಿಸಿ, ಕೋಲ್ ಇಂಡಿಯಾ, ಭಾರ್ತಿ ಏರ್‌ಟೆಲ್, ಬಜಾಜ್ ಆಟೋ, ಟಿಸಿಎಸ್, ಏಶ್ಯನ್ ಪೇಂಟ್, ಪವರ್ ಗ್ರಿಡ್, ಟಾಟಾ ಮೋಟರ್, ಆರ್‌ಐಎಲ್, ಐಟಿಸಿ ಶೇರುಗಳು ಶೇ.2ರ ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 12 ಪೈಸೆಗಳ ಏರಿಕೆಯನ್ನು ದಾಖಲಿಸಿ 69.71 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.