ಮುಂಬಯಿ:ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಷೇರು ಖರೀದಿಯಲ್ಲಿ ತೊಡಗಿದ ಪರಿಣಾಮ ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಗುರುವಾರ(ಏಪ್ರಿಲ್ 01)ದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 390 ಅಂಕ ಏರಿಕೆಯಾಗಿದೆ.
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 391.14 ಅಂಕ ಏರಿಕೆಯಾಗಿದ್ದು, 49,900.29 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 113.55 ಅಂಕ ಏರಿಕೆಯಾಗಿ 14,804.25ರ ಗಡಿ ತಲುಪಿದೆ.
ಸೆನ್ಸೆಕ್ಸ್ ಏರಿಕೆಯಿಂದ ಎಚ್ ಸಿಎಲ್ ಟೆಕ್, ಟೈಟಾನ್, ಇಂಡಸ್ ಇಂಡ್ ಬ್ಯಾಂಕ್, ಎನ್ ಟಿಪಿಸಿ, ಬಜಾಜ್ ಆಟೋ ಮತ್ತು ಎನ್ ಟಿಪಿಸಿ ಷೇರುಗಳು ಲಾಭಗಳಿಸಿವೆ. ನೆಸ್ಲೆ, ಐಟಿಸಿ, ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಯುಎಲ್ ಷೇರುಗಳು ನಷ್ಟ ಅನುಭವಿಸಿವೆ.
ಬುಧವಾರ(ಮಾರ್ಚ್ 31) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 627.43 ಅಂಕ ಕುಸಿತ ಕಂಡು 49,509.15 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು. ಎನ್ ಎಸ್ ಇ ನಿಫ್ಟಿ 154.40 ಅಂಕ ಕುಸಿತವಾಗಿದ್ದು, 14,690.70ರ ಗಡಿಗೆ ಇಳಿಕೆಯಾಗಿತ್ತು.