Advertisement
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 179.3 ಅಂಕಗಳ ನಷ್ಟದೊಂದಿಗೆ 38,877.12 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
Related Articles
Advertisement
ಇದೇ ಗುರುವಾರ ಆರ್ ಬಿ ಐ ಹಣಕಾಸು ನೀತಿ ಸಮಿತಿಯು 2019-20ರ ಸಾಲಿನ ತನ್ನ ಮೊದಲ ಪ್ರಕಟನೆಯನ್ನು ಮಾಡಲಿದ್ದು ಮುಂಬಯಿ ಶೇರು ಪೇಟೆಯ ಕಣ್ಣು ಅದರ ಮೇಲೆಯೇ ನೆಟ್ಟಿದೆ.
ಇಂದಿನ ವಹಿವಾಟಿನಲ್ಲಿ ಎಸ್‌ಬಿಐ ಶೇರು ಶೇ.2.4ರ ನಷ್ಟಕ್ಕೆ ಗುರಿಯಾಗಿ ಟಾಪ್ ಲೂಸರ್ ಎನಿಸಿಕೊಂಡಿತು. ಇದನ್ನು ಅನುಸರಿಸಿ ಎಸ್ ಬ್ಯಾಂಕ್, ಭಾರ್ತಿ ಏರ್ ಟೆಲ್, ಲಾರ್ಸನ್, ಸನ್ ಫಾರ್ಮಾ, ಮಹೀಂದ್ರ, ಐಸಿಐಸಿಐ ಬ್ಯಾಂಕ್, ಒಎನ್‌ಜಿಸಿ, ಆರ್‌ಐಎಲ್ ಶೇರುಗಳು ಶೇ.2.37ರ ಕುಸಿತಕ್ಕೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,760 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 974 ಶೇರುಗಳು ಮುನ್ನಡೆ ಸಾಧಿಸಿದವು; 1,631 ಶೇರುಗಳು ಹಿನ್ನಡೆಗೆ ಗುರಿಯಾದವು; 155 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.