ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ನೂರಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.
ವಿದೇಶೀ ಬಂಡವಾಳದ ನಿರಂತರ ಒಳ ಹರಿವು, ದೇಶೀಯ ಮತ್ತು ಜಾಗತಿಕ ಶೇರು ಪೇಟೆಗಳಲ್ಲಿನ ಧನಾತ್ಮಕತೆಯೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯಲ್ಲಿ ಇಂದು ಉತ್ಸಾಹ ಕಂಡು ಬಂತು.
ಹಾಗಿದ್ದರೂ ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 22 ಪೈಸೆಗಳ ಕುಸಿತವನ್ನು ಕಂಡು 69.73 ರೂ. ಮಟ್ಟಕ್ಕೆ ಇಳಿಯಿತು.
ಬೆಳಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 16.67 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 39,99.96 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 1.30 ಅಂಕಗಳ ಏರಿಕೆಯೊಂದಿಗೆ 11,926.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನ ಟಾಪ್ ಗೇನರ್‌ಗಳು : ಎಸ್ ಬ್ಯಾಂಕ್, ಕೋಲ್ ಇಂಡಿಯಾ, ಜೆಎಸ್‌ಡಬ್ಲ್ಯು ಸ್ಟೀಲ್, ಝೀ ಎಂಟರ್‌ಟೇನ್‌ಮೆಂಟ್, ಹಿಂಡಾಲ್ಕೋ; ಟಾಪ್ ಲೂಸರ್‌ಗಳು ಭಾರ್ತಿ ಇನ್‌ಫ್ರಾಟೆಲ್, ಎಚ್ ಡಿ ಎಫ್ ಸಿ, ಗ್ರಾಸಿಂ, ಕೋಟಕ್ ಮಹಿಂದ್ರ, ಹೀರೋ ಮೋಟೋಕಾರ್ಪ್.