Advertisement

ಮತಗಟ್ಟೆ ಸಮೀಕ್ಷೆಗೂ ಮುನ್ನ ಸೆನ್ಸೆಕ್ಸ್‌ ಏರಿಕೆ

01:26 AM May 18, 2019 | Team Udayavani |
ಭಾನುವಾರ ಕೊನೆಯ ಹಂತದ ಮತದಾನ ಮುಗಿದ ಬಳಿಕವಷ್ಟೇ ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಹೊರಬೀಳಲಿದೆ. ಆದರೂ, ಎಕ್ಸಿಟ್ ಪೋಲ್ ಈಗಲೇ ಮುಂಬೈ ಷೇರುಪೇಟೆ ಮೇಲೆ ಪ್ರಭಾವ ಬೀರಿದೆ. ಸ್ಥಿರ ಸರ್ಕಾರ ರಚನೆಯಾಗುತ್ತದೆಯೋ ಇಲ್ಲವೋ, ಸುಧಾರಣಾ ಕ್ರಮಗಳು ಮುಂದುವರಿಯುತ್ತದೆಯೋ ಇಲ್ಲವೋ ಎಂಬಿತ್ಯಾದಿ ವಿಚಾರಗಳು ಹೂಡಿಕೆದಾರರಲ್ಲಿ ಗೊಂದಲ ಮೂಡಿಸಿದೆ. ಆದರೂ ಸ್ಥಿರ ಸರ್ಕಾರದ ಭರವಸೆಯನ್ನು ಹೊತ್ತು ಹೂಡಿಕೆದಾರರು ಶುಕ್ರವಾರ ಷೇರುಗಳ ಭಾರೀ ಖರೀದಿಯಲ್ಲಿ ತೊಡಗಿದರು. ಪರಿಣಾಮ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 537 ಅಂಕ ಏರಿಕೆ ದಾಖಲಿಸಿ, 37,930ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಇದೇ ವೇಳೆ, ನಿಫ್ಟಿ ಕೂಡ 150 ಅಂಕ ಏರಿಕೆ ಕಂಡು, ದಿನಾಂತ್ಯಕ್ಕೆ 11,407ರಲ್ಲಿ ವಹಿವಾಟು ಮುಗಿಸಿತು. ಜಾಗತಿಕ ವಿದ್ಯಮಾನಗಳ ನಡುವೆಯೇ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸೆನ್ಸೆಕ್ಸ್‌ ಏರಿಕೆಗೆ ಕಾರಣವಾದವು.
Advertisement

Udayavani is now on Telegram. Click here to join our channel and stay updated with the latest news.

Next