ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ದೌರ್ಬಲ್ಯ ತೋರಿಬಂದ ಹೊರತಾಗಿಯೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳನ್ನು ಪುನರ್ ಸಂಪಾದಿಸುವಲ್ಲಿ ಸಫಲವಾಯಿತು.
ನಿನ್ನೆ ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 362.92 ಅಂಕಗಳನ್ನೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 114 ಅಂಕಗಳನ್ನೂ ಕಳೆದುಕೊಂಡಿದ್ದವು.
ಬ್ಯಾಂಕಿಂಗ್ ಮತ್ತು ಐಟಿ ರಂಗದ ಶೇರುಗಳು ಉತ್ತಮ ಖರೀದಿ ಬೆಂಬಲವನ್ನು ಪಡೆದವು. ಟಾಪ್ ಗೇನರ್‌ಗಳಾಗಿ ಮೂಡಿ ಬಂದ ವೇದಾಂತ, ಕೋಲ್ ಇಂಡಿಯಾ, ಹೀರೋ ಮೋಟೋ ಕಾರ್ಪ್, ಟಿಸಿಎಸ್, ಎಸ್‌ಬಿಐ, ಟಾಟಾ ಸ್ಟೀಲ್, ಎಕ್ಸಿಸ್ ಬ್ಯಾಂಕ್, ಪವರ್ ಗ್ರಿಡ್, ಎಸ್ ಬ್ಯಾಂಕ್, ಟಾಟಾ ಮೋಟರ್, ಎಚ್ ಯು ಎಲ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಇನ್‌ಫೋಸಿಸ್ ಶೇರುಗಳು ಶೇ.1.83ರ ಏರಿಕೆಯನ್ನು ದಾಖಲಿಸಿದವು.
ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 96 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 38,696.34 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,613.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರಿನ ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 4 ಪೈಸೆಯ ಚೇತರಿಕೆಯನ್ನು ಕಂಡು 69.36 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.