Advertisement

ಕಚ್ಚಾತೈಲ ಬೆಲೆ ಇಳಿಕೆ: ಮುಂಬಯಿ ಶೇರು 196 ಅಂಕ ಜಿಗಿತ

04:44 PM Jul 17, 2018 | |

ಮುಂಬಯಿ : ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದುದನ್ನು ಅನುಸರಿಸಿ ತೈಲ, ಲೋಹ ಮತ್ತು ಸಾರ್ವಜನಿಕ ರಂಗದ ಕಂಪೆನಿಗಳ ಶೇರುಗಳು ಉತ್ತಮ ಖರೀದಿಯನ್ನು ಕಂಡ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರದ ವಹಿವಾಟನ್ನು 196 ಅಂಕಗಳ ಜಿಗಿತದೊಂದಿಗೆ 36,519.96 ಅಂಕಗಳ ಮಟ್ಟದಲ್ಲಿ ಹೊಸ ಭರವಸೆಯೊಂದಿಗೆ ಸಮಾಪನಗೊಳಿಸಿತು.

Advertisement

ಅಂತಾರಾಷ್ಟೀಯ ಕಚ್ಚಾ ತೈಲ ಬೆಲೆ ನಿನ್ನೆ ಶೇ.4ರಷ್ಟು ಇಳಿದದ್ದೇ ಶೇರು ಪೇಟೆಗಳಲ್ಲಿನ ತೇಜಿಗೆ ಕಾರಣವಾಗಿತ್ತು. ಇದರಿಂದಾಗಿ ಡಾಲರ್‌ ಎದುರು ರೂಪಾಯಿ ದರ ಚೇತರಿಸಿತು. ಇದಲ್ಲದೆ ಹಣಕಾಸು ಸಚಿವಾಲಯ ಇನ್ನು ಕೆಲವೇ ದಿನಗಳಲ್ಲಿ PNB,  ಕಾರ್ಪೊರೇಶನ್‌ ಬ್ಯಾಂಕ್‌ ಮತ್ತು ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ ಗೆ 10,000 ಕೋಟಿ ರೂ. ಮರಪೂರಣ ಮಾಡಲಿದೆ ಎಂಬ ಸುದ್ದಿ ಚೇತೋಹಾರಿಯಾಯಿತು. 

ಸೆನ್ಸೆಕ್ಸ್‌ನಂತೆ 71.20 ಅಂಕಗಳ ಜಿಗಿತವನ್ನು ಕಂಡ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 11,008.05 ಅಂಕಗಳ ಮಟ್ಟಕ್ಕೆ ಏರಿತು. ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 224.64 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,720 ಕಂಪೆನಿಗಳ ಶೇರುಗಳ ವಹಿವಾಟಿಗೆ ಒಳಪಟ್ಟವು; 1,442 ಶೇರುಗಳು ಮುನ್ನಡೆ ಸಾಧಿಸಿದವು; 1,123 ಶೇರುಗಳು ಹಿನ್ನಡೆಗೆ ಗುರಿಯಾದವು; 155 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next