ಮುಂಬಯಿ : ಡಾಲರ್ ಎದುರು ರೂಪಾಯಿ 15 ಪೈಸೆ ಚೇತರಿಸಿಕೊಂಡು 16 ತಿಂಗಳ ಕನಿಷ್ಠ ಮಟ್ಟದಿಂದ ಮೇಲೆದ್ದು 67.97 ರೂ ಮಟ್ಟಕ್ಕೆ ಏರಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಐದು ದಿನಗಳ ನಿರಂತರ ಸೋಲಿಗೆ ಬ್ರೇಕ್ ಹಾಕಿ, ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 83 ಅಂಕಗಳ ಜಿಗಿತವನ್ನು ದಾಖಲಿಸಿತು.
ಅಮೆರಿಕ – ಚೀನ ವಾಣಿಜ್ಯ ಉದ್ವಿಗ್ನತೆ ಶಮನಗೊಂಡಿರುವುದನ್ನು ಸ್ವಾಗತಿಸಿರುವ ಅಮೆರಿಕ ಶೇರು ಪೇಟೆ ನಿನ್ನೆಯ ವಹಿವಾಟಿನಲ್ಲಿ ಜಿಗಿತವನ್ನು ಸಾಧಿಸಿರುವುದನ್ನು ಅನುಸರಿಸಿ ಇಂದು ಬಹುತೇಕ ಏಶ್ಯನ್ ಶೇರು ಪೇಟೆಗಳು ಚಿಗುರಿಕೊಂಡದ್ದೇ ಮುಂಬಯಿ ಶೇರು ಪೇಟೆಯಲ್ಲಿನ ತೇಜಿಗೆ ಕಾರಣವಾಯಿತು. ವಹಿವಾಟುದಾರರು ಇಂದು ಮುಂಚೂಣಿ ಶೇರುಗಳ ವ್ಯಾಪಕ ಖರೀದಿಯಲ್ಲಿ ತೊಡಗಿಕೊಂಡರು.
ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ 82.14 ಅಂಕಗಳ ಮುನ್ನಡೆಯೊಂದಿಗೆ 34,698.27 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಪ್ಟಿ ಸೂಚ್ಯಂಕ 26.70 ಅಂಕಗಳ ಮುನ್ನಡೆಯೊಂದಿಗೆ 10,543.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಬಜಾಜ್ ಫಿನಾನ್ಸ್, ಅಲ್‌ಟ್ರಾ ಟೆಕ್ ಸಿಮೆಂಟ್, ಎಸ್‌ಬಿಐ, ಟಾಟಾ ಸ್ಟೀಲ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಬಜಾಜ್ ಫಿನ್‌ಸರ್ವ್, ಬಜಾಜ್ ಫಿನಾನ್ಸ್, ಐಡಿಯಾ ಸೆಲ್ಯುಲರ್, ಎನ್‌ಟಿಪಿಸಿ; ಟಾಪ್ ಲೂಸರ್‌ಗಳು : ಎಚ್‌ಪಿಸಿಎಲ್, ಅಲ್‌ಟ್ರಾಟೆಕ್ ಸಿಮೆಂಟ್, ಭಾರ್ತಿ ಇನ್‌ಫ್ರಾಟೆಲ್, ಅದಾನಿ ಪೋರ್ಟ್, ಏಶ್ಯನ್ ಪೇಂಟ್.