Advertisement

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

01:13 PM Jan 06, 2025 | Team Udayavani |

ಮುಂಬೈ: ವಿದೇಶಿ ಸಾಂಸ್ಥಿಕ ಹೂಡಿಕೆದಾರರ (Foreign institutional Investors) ವಹಿವಾಟಿನ ಋಣಾತ್ಮಕ ಅಂಶದ ಪರಿಣಾಮ ಸೋಮವಾರ (ಜನವರಿ 06) ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಾವಿರಕ್ಕೂ ಅಧಿಕ ಅಂಕಗಳು ಕುಸಿತ ಕಂಡಿದೆ.

Advertisement

ಷೇರುಪೇಟೆ ಸಂವೇದಿ ಸೂಚ್ಯಂಕ 1,165.74 ಅಂಕಗಳು ಕುಸಿತದೊಂದಿಗೆ 78,057.37 ಅಂಕಗಳಲ್ಲಿ ವಹಿವಾಟು ಮುಂದುವರಿದಿದ್ದು, ಎನ್‌ ಎಸ್‌ ಇ ನಿಫ್ಟಿ 366/85 ಅಂಕಗಳು ಇಳಿಕೆಯಾಗಿ, 23,637.90 ಅಂಕಗಳ ಗಡಿ ತಲುಪಿತ್ತು.

ಮಧ್ಯಾಹ್ನ 12.30ರ ಹೊತ್ತಿಗೆ ಷೇರುಪೇಟೆ ಸಂವೇದಿ ಸೂಚ್ಯಂಕ 842 ಅಂಕ ಕುಸಿತಗೊಂಡಿದ್ದು, 78, 381.07 ಅಂಕಗಳಲ್ಲಿ ವಹಿವಾಟು ಮುಂದುವರಿಸಿದೆ.

ದೇಶದಲ್ಲಿ ಎಚ್‌ ಎಂಪಿವಿ ಕಳವಳ:

ಭಾರತದಲ್ಲಿ ಸೋಮವಾರ ಎಚ್‌ ಎಂಪಿವಿ ಎರಡು ಪ್ರಕರಣಗಳು ಪತ್ತೆಯಾಗಿರುವುದ ದೇಶೀಯ ಷೇರುಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

Advertisement

ಬೆಂಗಳೂರಿನ ಆಸ್ಪತ್ರೆಯಲ್ಲಿ ಇಂದು ಇಬ್ಬರು ಮಕ್ಕಳಲ್ಲಿ ಎಚ್‌ ಎಂಪಿವಿ ಸೋಂಕು ಪತ್ತೆಯಾಗಿತ್ತು. ಆದರೆ ಈ ಮಕ್ಕಳು ಯಾವುದೇ ಅಂತಾರಾಷ್ಟ್ರೀಯ ಟ್ರಾವಲ್‌ ಹಿಸ್ಟರಿ ಹೊಂದಿಲ್ಲ ಎಂದು ವೈದ್ಯರು ತಿಳಿಸಿದ್ದರು.

ಪಿಎಸ್‌ ಯು ಬ್ಯಾಂಕ್‌ ಷೇರು ಭಾರೀ ಪ್ರಮಾಣದಲ್ಲಿ ಕುಸಿತ ಕಂಡು ನಷ್ಟ ಅನುಭವಿಸಿದೆ. ಟಾಟಾ ಸ್ಟೀಲ್‌, ಬಿಪಿಸಿಎಲ್‌, ಅದಾನಿ ಎಂಟರ್‌ಪ್ರೈಸಸ್‌, ಟ್ರೆಂಟ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಷೇರುಗಳು ನಷ್ಟ ಅನುಭವಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next