Advertisement

ಜಾಗತಿಕ ಶೇರು ಪೇಟೆಗಳಲ್ಲಿ ಹಿನ್ನಡೆ; ಮುಂಬಯಿ ಶೇರು 85 ಅಂಕ ನಷ್ಟ

09:39 AM May 30, 2019 | |

ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿ ತೋರಿ ಬಂದ ದೌರ್ಬಲ್ಯ ಮತ್ತು ಹೊಸದಾಗಿ ಆರಂಭಗೊಂಡಿರುವ ವಿದೇಶೀ ಬಂಡವಾಳದ ಹೊರ ಹರಿವಿನ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಹಿನ್ನಡೆ ತೋರಿ ಬಂತು.

Advertisement

ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್‌ 85.06 ಅಂಕಗಳ ನಷ್ಟದೊಂದಿಗೆ 39,664.67 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 23.80 ಅಂಕಗಳ ನಷ್ಟದೊಂದಿಗೆ 11,905.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಡಾಲರ್‌ ಎದುರು ರೂಪಾಯಿ ಇಂದು 14 ಪೈಸೆಗಳ ಹಿನ್ನಡೆಯನ್ನು ಕಂಡು 69.83 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಬ್ರೆಂಟ್‌ ಕಚ್ಚಾ ತೈಲ ಇಂದು ಶೇ.0.74ರ ಕುಸಿತವನ್ನು ಕಂಡು ಬ್ಯಾರಲ್‌ಗೆ 68.16 ಡಾಲರ್‌ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

ಇಂದು ಬೆಳಗ್ಗಿನ ವಹಿವಾಟಿನ ಟಾಪ್‌ ಗೇನರ್‌ಗಳು : ಭಾರ್ತಿ ಇನ್‌ಫ್ರಾಟೆಲ್‌, ಟಿಸಿಎಸ್‌, ಎಚ್‌ಸಿಎಲ್‌ ಟೆಕ್‌, ಗೇಲ್‌, ವಿಪ್ರೋ; ಟಾಪ್‌ ಲೂಸರ್‌ಗಳು : ವೇದಾಂತ, ಒಎನ್‌ಜಿಸಿ, ಇಂಡಿಯಾ ಬುಲ್ಸ್‌ ಹೌಸಿಂಗ್‌, ಝೀ ಎಂಟರ್‌ಟೇನ್‌ಮೆಂಟ್‌, ಯುಪಿಎಲ್‌.

Advertisement

Udayavani is now on Telegram. Click here to join our channel and stay updated with the latest news.

Next