ಮುಂಬಯಿ : ಜಾಗತಿಕ ವಾಣಿಜ್ಯ ಸಮರ ಭೀತಿ ಹೆಚ್ಚುತ್ತಿರುವ ನಡುವೆಯೇ ನಡೆಯುತ್ತಿರುವ ಅಮೆರಿಕದ ಫೆಡಲರ್ ರಿಸರ್ವ್ ಸಭೆಯ ಫಲಿತಾಂಶ ಹೊರಬೀಳುವ ಮುನ್ನ ಹೂಡಿಕೆದಾರರು ಮತ್ತು ವಹಿವಾಟುದಾರರು ತೋರುತ್ತಿರುವ ಎಚ್ಚರಿಕೆಯ ನಡೆಯ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ನಡೆ ತೋರಿವೆ.
ಬೆಳಗ್ಗೆ 11.10ರ ಸುಮಾರಿಗೆ ಸೆನ್ಸೆಕ್ಸ್ 77.96 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 39,038.75 ಅಂಕಗಳ ಮಟ್ಟದಲ್ಲೂ ರಾಷ್ಟೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂ 16.20 ಅಂಕಗಳ ಏರಿಕೆಯೊಂದಿಗೆ 11,688.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ನಿನ್ನೆ ಸೋಮವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 491.28 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿತ್ತಾದರೆ ನಿಫ್ಟಿ 151.15 ಅಂಕಗಳ ಕುಸಿತವನ್ನು ಅನುಭವಿಸಿತ್ತು.
ಇಂದಿನ ಟಾಪ್ ಲೂಸರ್‌ಗಳ ಪೈಕಿ ಎಸ್ ಬ್ಯಾಂಕ್, ಟಾಟಾ ಸ್ಟೀಲ್, ಏಶ್ಯನ್ ಪೇಂಟ್, ಎಚ್‌ಯುಎಲ್, ಎಸ್‌ಬಿಐ ಮತ್ತು ಆರ್‌ಐಎಲ್ ಶೇರುಗಳು ಶೇ.1.55ರ ನಷ್ಟಕ್ಕೆ ಗುರಿಯಾದವು.
ಪವರ್ ಗ್ರಿಡ್. ಇನ್‌ಫೋಸಿಸ್, ಇಂಡಸ್‌ಇಂಡ್ ಬ್ಯಾಂಕ್, ಎಚ್ ಸಿ ಎಲ್ ಟೆಕ್, ವೇದಾಂತ, ಮಹೀಂದ್ರ, ಬಜಾಜ್ ಫಿನಾನ್ಸ್ ಮತ್ತು ಎಚ್ ಡಿ ಎಫ್ ಸಿ ಶೇರುಗಳು ಶೇ.1.42 ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದು 9 ಪೈಸೆಗಳ ಏರಿಕೆಯನ್ನು ಕಂಡು 69.82 ರೂ. ಮಟ್ಟಕ್ಕೆ ತಲುಪಿತು. ಇದೇ ವೇಳೆ ಅಂತಾರಾಷ್ಟ್ರೀಯ ಬ್ರೆಂಟ್ ಕಚ್ಚಾ ತೈಲ ಶೇ.0.10 ಇಳಿಕೆಯನ್ನು ಕಂಡು ಬ್ಯಾರಲ್‌ಗೆ 60.88 ಡಾಲರ್ ದರದಲ್ಲಿ ಬಿಕರಿಯಾಗುತ್ತಿತ್ತು.