Advertisement

Sensex, Nifty ಮತ್ತೆ ದಾಖಲೆ ನಿರ್ಮಾಣ

12:08 AM Jan 13, 2024 | Team Udayavani |

ಮುಂಬೈ: ವಾರಾಂತ್ಯವಾಗಿರುವ ಶುಕ್ರವಾರ ಬಾಂಬೆ ಷೇರು ಪೇಟೆ ಸೆನ್ಸೆಕ್ಸ್‌ ನಿಫ್ಟಿ ಮತ್ತೂಮ್ಮೆ ಸಾರ್ವಕಾಲಿಕ ದಾಖಲೆ ತಲುಪಿದೆ. ದಿನದ ಮುಕ್ತಾಯಕ್ಕೆ ಬಿಎಸ್‌ಇನಲ್ಲಿ ಸೆನ್ಸೆಕ್ಸ್‌ 847. ಪಾಯಿಂಟ್ಸ್‌ಗಳ ಏರಿಕೆಯೊಂದಿಗೆ 72,568.45 ಕ್ಕೆ ಅಂಕಕ್ಕೆ ಮುಕ್ತಾಯ ಗೊಂಡಿದೆ. ಮಧ್ಯಂತರದಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 999.78 ಪಾಯಿಂಟ್‌ ವರೆಗೆ ಏರಿಕೆಯಾಗಿ 72,720.96ರ ವರೆಗೆ ತಲುಪಿತ್ತು. ನಿಫ್ಟಿ 247.35 ಪಾಯಿಂಟ್‌ಗಳಷ್ಟು ಏರಿಕೆಯೊಂದಿಗೆ 21,894.55 ಅಂಕಕ್ಕೆ ಮುಕ್ತಾಯಗೊಂಡಿದೆ.

Advertisement

ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಷೇರುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ಈ ಏರಿಕೆಯಾಗಿದೆ. ಇದೇ ವೇಳೆ, ಅಮೆರಿಕದ ಡಾಲರ್‌ ಎದುರು ರೂಪಾಯಿ 11 ಪೈಸೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next