ಮುಂಬಯಿ:ಕಳೆದ ಆರು ವಾರಗಳ ನಂತರ ಮುಂಬಯಿ ಷೇರುಪೇಟೆಯ ಮಂಗಳವಾರ(ಜುಲೈ13)ದ ದಿನಾಂತ್ಯದಲ್ಲಿ ಭರ್ಜರಿ ವಹಿವಾಟು ನಡೆದ ಪರಿಣಾಮ ಸಂವೇದಿ ಸೂಚ್ಯಂಕ 390ಕ್ಕೂ ಅಧಿಕ ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:1983 ವಿಶ್ವಕಪ್ ಹೀರೋ ಯಶಪಾಲ್ ಶರ್ಮಾ ನಿಧನ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 397.04 ಅಂಕಗಳಷ್ಟು ಏರಿಕೆಯೊಂದಿಗೆ 52,769.73 ಅಂಕಗಳೊಂದಿಗೆ ದಾಖಲೆ ಪ್ರಮಾಣದಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಮೇ 31ರ ನಂತರ ಮುಂಬಯಿ ಷೇರುಪೇಟೆಯ ವಹಿವಾಟಿನಲ್ಲಿ ಅತೀ ಹೆಚ್ಚು ಲಾಭಾಂಶ ಕಂಡಂತಾಗಿದೆ.
ಎನ್ ಎಸ್ ಇ ನಿಫ್ಟಿ 119.75 ಅಂಕಗಳಷ್ಟು ಏರಿಕೆಯಾಗಿದ್ದು, 15,812.35 ಅಂಕಗಳ ದಾಖಲೆಯ ಗಡಿ ದಾಟಿ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಸೆನ್ಸೆಕ್ಸ್ ಏರಿಕೆಯಿಂದ ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ, ಆ್ಯಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ, ಎನ್ ಟಿಪಿಸಿ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಲಾಭ ಗಳಿಸಿದೆ.
ಏತನ್ಮಧ್ಯೆ ಎಚ್ ಸಿಎಲ್ ಟೆಕ್, ಡಾ.ರೆಡ್ಡೀಸ್ ಮಾರುತಿ ಮತ್ತು ಟೆಕ್ ಮಹೀಂದ್ರಾ ಷೇರುಗಳು ನಷ್ಟ ಅನುಭವಿಸಿದೆ. ಮುಂಬಯಿ ಷೇರುಪೇಟೆ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಏರಿಕೆ ಕಂಡಿತ್ತು.