ಮುಂಬೈ: ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿರುವ ನಿರ್ಧಾರದ ಹಿನ್ನೆಲೆ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ದಾಖಲೆ ಪ್ರಮಾಣದ ಏರಿಕೆಯೊಂದಿಗೆ ಗುರುವಾರ (ಡಿ.14) ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:Madhugiri: ಚಿಕಿತ್ಸೆಗಾಗಿ ಲಂಚ… ಮಧುಗಿರಿ ಆಸ್ಪತ್ರೆ ವೈದ್ಯರ ಮೇಲೆ ದೂರುಗಳ ಅನಾವರಣ
ಬಾಂಬೆ ಷೇರುಪೇಟೆಯ ವಹಿವಾಟಿನಲ್ಲಿ ಐಟಿ, ಟೆಕ್ ಹಾಗೂ ರಿಯಲ್ಟಿ ಶೇರುಗಳು ಭಾರೀ ಪ್ರಮಾಣದಲ್ಲಿ ಖರೀದಿಯಾಗಿದ್ದು, ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 929.60 ಅಂಕಗಳಿಗೆ ಏರಿಕೆಯಾಗಿದ್ದು, ದಾಖಲೆ ಮಟ್ಟದ 70,514.20 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 256.35 ಅಂಕಗಳ ಏರಿಕೆಯೊಂದಿಗೆ 21,182.70 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ದಿನದ ವಹಿವಾಟಿನ ಮಧ್ಯಂತರದಲ್ಲಿ ನಿಫ್ಟಿ 285 ಅಂಕಗಳಿಗೆ ಜಿಗಿದಿತ್ತು.
ಸೆನ್ಸೆಕ್ಸ್ ಏರಿಕೆಯಿಂದ ಟೆಕ್ ಮಹೀಂದ್ರಾ, ಇನ್ಫೋಸಿಸ್, ವಿಪ್ರೋ, ಎಚ್ ಸಿಎಲ್ ಟೆಕ್ನಾಲಜೀಸ್, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಮಹೀಂದ್ರಾ & ಮಹೀಂದ್ರಾ ಷೇರುಗಳು ಲಾಭಗಳಿಸಿವೆ.
ಮತ್ತೊಂದೆಡೆ ಪವರ್ ಗ್ರಿಡ್, ನೆಸ್ಲೆ, ಜೆಎಸ್ ಡಬ್ಲ್ಯು ಸ್ಟೀಲ್, ಮಾರುತಿ, ಟೈಟಾನ್ ಮತ್ತು ಟಾಟಾ ಮೋಟಾರ್ಸ್ ಸೇರಿದಂತೆ ಹಲವು ಷೇರುಗಳು ನಷ್ಟ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಯೋಲ್, ಹಾಂಗ್ ಕಾಂಗ್ ಷೇರುಪೇಟೆ ಸೆನ್ಸೆಕ್ಸ್ ಜಿಗಿತ ಕಂಡಿದೆ.