Advertisement

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 128 ಅಂಕ ಏರಿಕೆ, ನಿಫ್ಟಿ 14,940ಕ್ಕೆ ಕುಸಿತ

11:47 AM Mar 17, 2021 | Team Udayavani |

ಮುಂಬಯಿ: ಅಮೆರಿಕ ಫೆಡರಲ್ ರಿಸರ್ವ್ ನೀತಿಯ ತೀರ್ಮಾನಕ್ಕೂ ಮುನ್ನ ಜಾಗತಿಕ ಷೇರುಮಾರುಕಟ್ಟೆಯ ಬೆಳವಣಿಗೆಯ ಪರಿಣಾಮ ಬುಧವಾರ(ಮಾರ್ಚ್ 17) ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯೊಂದಿಗೆ ಎಚ್ಚರಿಕೆಯ ವಹಿವಾಟು ಆರಂಭಿಸಿದೆ.

Advertisement

ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 128.84 ಅಂಕಗಳ ಏರಿಕೆಯೊಂದಿಗೆ 50, 492.80 ಅಂಕಗಳ ವಹಿವಾಟು ನಡೆಸಿದೆ. ಎನ್ ಎಸ್ ಇ ನಿಫ್ಟಿ 30.50 ಅಲ್ಪ ಅಂಕಗಳ ಏರಿಕೆಯೊಂದಿಗೆ 14,940.95 ಅಂಕಗಳ ವಹಿವಾಟು ಆರಂಭಿಸಿದೆ.

ಸೆನ್ಸೆಕ್ಸ್ ಅಲ್ಪ ಚೇತರಿಕೆಯಿಂದ ಎಲ್ ಆ್ಯಂಡ್ ಟಿ, ಎಚ್ ಸಿಎಲ್ ಟೆಕ್, ಟೆಕ್ ಮಹೀಂದ್ರ, ಎಚ್ ಡಿಎಫ್ ಸಿ ಬ್ಯಾಂಕ್, ಟಿಸಿಎಸ್ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಲಾಭಗಳಿಸಿವೆ.

ಮತ್ತೊಂದೆಡೆ ಏಷ್ಯನ್ ಪೈಂಟ್ಸ್, ಒಎನ್ ಜಿಸಿ ಮತ್ತು ನೆಸ್ಲೆ ಇಂಡಿಯಾ ಷೇರುಗಳು ನಷ್ಟ ಅನುಭವಿಸಿವೆ. ಮಂಗಳವಾರ (ಮಾ.16) ಷೇರುಪೇಟೆಯ ಸಂವೇದಿ ಸೂಚ್ಯಂಕ 31.12 ಅಂಕಗಳ ಕುಸಿತ ದಾಖಲಿಸಿ, 50, 363.96ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ನಿಫ್ಟಿ ಕೂಡಾ 19 ಅಂಕ ಕುಸಿದು 14,910.45ರಲ್ಲಿ ಕೊನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next