Advertisement
ಮೋದಿ ಸುನಾಮಿಯ ಫಲವಾಗಿ ಇಂದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಪ್ಟಿ ಇನ್ನೊಂದು ದಾಖಲೆಯ ಎತ್ತರವನ್ನು ಏರುವ ಸಾಧನೆ ಮಾಡಿದವು.
Related Articles
Advertisement
ಇದನ್ನು ಅನುಸರಿಸಿ ಎಸ್ ಬ್ಯಾಂಕ್, ಎನ್ ಟಿ ಪಿ ಸಿ, ಲಾರ್ಸನ್, ಎಕ್ಸಿಸ್ ಬ್ಯಾಂಕ್, ಎಸ್‌ಬಿಐ, ಮಹೀಂದ್ರ, ಅವಳಿ ಎಚ್ ಡಿ ಎಫ್ ಸಿ, ವೇದಾಂತ, ಎಚ್ ಯು ಎಲ್, ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್, ಎಚ್ ಸಿ ಎಲ್, ಟಿಸಿಎಸ್, ಐಟಿಸಿ ಶೇರುಗಳು ಶೇ.3.79ರ ಏರಿಕೆಯನ್ನು ಕಂಡವು.
ಡಾಲರ್ ಎದುರು ರೂಪಾಯಿ ಇಂದು ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಕಂಡು 69.59 ರೂ.ಗೆ ಸರಿಯಿತು. ಬ್ರೆಂಟ್ ಕಚ್ಚಾತೈಲ ಶೇ.0.04ರ ಏರಿಕೆಯನ್ನು ಕಂಡು ಬ್ಯಾರಲ್ ಗೆ 67.50 ಡಾಲರ್ ನಲ್ಲಿ ಬಿಕರಿಯಾಗುತ್ತಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು ಕಂಪೆನಿಗಳ 2,766 ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,793 ಶೇರುಗಳು ಮುನ್ನಡೆ ಸಾಧಿಸಿದವು; 785 ಶೇರುಗಳು ಹಿನ್ನಡೆಗೆ ಗುರಿಯಾದವು; 188 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.