ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರವೃತ್ತಿ ತೋರಿ ಬಂದಿರುವುದು, ವಿದೇಶೀ ಬಂಡವಾಳ ನಿರಂತರವಾಗಿ ಹರಿದು ಬರುತ್ತಿರುವುದು ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯಲ್ಲಿ ತೇಜಿ ಕಂಡು ಬರುತ್ತಿದೆ.
ಆ ಪ್ರಕಾರ ಇಂದಿನ ಆರಂಭಿಕ ವಹಿವಾಟಿನಲ್ಲಿ ಬ್ಯಾಂಕಿಂಗ್, ಮೆಟಲ್, ಆಯಿಲ್ ಆ್ಯಂಡ್ ಗ್ಯಾಸ್, ಟೆಲಿಕಾಂ ಮತ್ತು ಆಟೋ ಶೇರುಗಳು ಉತ್ತಮ ಏರಿಕೆಯನ್ನು ದಾಖಲಿಸಿದವು.
ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 360.98 ಅಂಕಗಳ ಮುನ್ನಡೆಯೊಂದಿಗೆ 39,266.82 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,783.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗೆಯ ಟಾಪ್ ಗೇನರ್‌ಗಾಳದ ಐಸಿಐಸಿಐ ಬ್ಯಾಂಕ್, ವೇದಾಂತ, ಕೋಲ್ ಇಂಡಿಯಾ, ಮಹೀಂದ್ರ, ಏಶ್ಯನ್ ಪೇಂಟ್, ಹೀರೋ ಮೋಟೋ ಕಾರ್ಪ್, ಮಾರುತಿ, ಇಂಡಸ್ ಇಂಡ್ ಬ್ಯಾಂಕ್, ಸನ್ ಫಾರ್ಮಾ, ಆರ್‌ಐಎಲ್ ಮತ್ತು ಎಚ್ ಸಿ ಎಲ್ ಶೇರುಗಳು ಶೇ. 2.67ರ ಏರಿಕೆ ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 17 ಪೈಸೆಗಳ ಕುಸಿತವನ್ನು ಕಂಡು 69.59 ರೂ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.