Advertisement

ಮುಂಬಯಿ ಶೇರು : ಆರಂಭಿಕ ಕುಸಿತದ ಬಳಿಕ 95 ಅಂಕ ಚೇತರಿಕೆ

11:43 AM Jun 26, 2018 | udayavani editorial |

ಮುಂಬಯಿ : ಅಮೆರಿಕ – ಚೀನ ನಡುವಿನ ವಾಣಿಜ್ಯ ಸಮರ ಉಲ್ಬಣಗೊಳ್ಳುವ ಭೀತಿಯಲ್ಲಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೀವ್ರ ಹಿನ್ನಡೆ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 132 ಅಂಕಗಳ ಹಿನ್ನಡೆಗೆ ಗುರಿಯಾಯಿತು.

Advertisement

ಆದರೆ ಬೆಳಗ್ಗೆ 11.35ರ ಹೊತ್ತಿಗೆ ಸೆನ್ಸೆಕ್ಸ್‌ ಮತ್ತು ನಿಫ್ಟಿ ಚೇತರಿಸಿಕೊಂಡು ಮುನ್ನಡೆ ಗಳಿಸುವಲ್ಲಿ ಸಫ‌ಲವಾದವು. 

ಅಂತೆಯೇ ಸೆನ್ಸೆಕ್ಸ್‌ 95.01 ಅಂಕಗಳ ಮುನ್ನಡೆಯೊಂದಿಗೆ 35,565.36 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 27 ಅಂಕಗಳ ಮುನ್ನಡೆಯೊಂದಿಗೆ 10,789.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಬೆಳಗ್ಗಿನ ವಹಿವಾಟಿನ ಟಾಪ್‌ ಗೇನರ್‌ಗಳು : ಕೋಲ್‌ ಇಂಡಿಯಾ, ಅಲ್‌ಟ್ರಾ ಟೆಕ್‌ ಸಿಮೆಂಟ್‌, ಐಡಿಯಾ ಸೆಲ್ಯುಲರ್‌, ಗ್ರಾಸಿಂ, ಎಚ್‌ ಡಿ ಎಫ್ ಸಿ. ಟಾಪ್‌ ಲೂಸರ್‌ಗಳು : ಟಾಟಾ ಮೋಟರ್‌, ಸಿಪ್ಲಾ, ರಿಲಯನ್ಸ್‌, ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫಿನಾನ್ಸ್‌ .

Advertisement

Udayavani is now on Telegram. Click here to join our channel and stay updated with the latest news.

Next